ಸಂಪಾಜೆ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0


ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಸಂಪಾಜೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಸಮಾರಂಭ ಜು. ೧೫ರಂದು ನಡೆಯಿತು. ಲಯನ್ಸ್ ಜಿಲ್ಲಾ ೨ನೇ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈರವರು ಅಧ್ಯಕ್ಷರಾಗಿ ಆಯ್ಕೆ ಗೊಂಡ ಲಯನ್ ಯೋಗೇಶ್ವರ ಎಸ್, ಕಾರ್ಯದರ್ಶಿ ಲಯನ್ ಧನಲಕ್ಷ್ಮೀ ನವೀನ್ ಹಾಗೂ ಕೋಶಾಧಿಕಾರಿ ಲಯನ್ ಇಂದಿರಾ ದೇವಿಪ್ರಸಾದ್ ಮತ್ತು ಕ್ಲಬಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋದಿಸಿದರು.