ಸುಳ್ಯ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಜನಾರ್ಧನ ಕಣಕ್ಕೂರು,ಕಾರ್ಯದರ್ಶಿಯಾಗಿ ಶಿವರಾಮ್

0

ಸುಳ್ಯ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಕಣಕ್ಕೂರು ಮೆಡಿಕಲ್ಸ್ ನ ಮಾಲಕರಾದ ಜನಾರ್ಧನ ಕಣಕ್ಕೂರ್ ಇವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಕಾರ್ಯದರ್ಶಿಯಾಗಿ ಎಸ್ .ವಿ .ಎಮ್. ಮೆಡಿಕಲ್ಸ್ ನ ಶಿವರಾಮ್, ಉಪಾಧ್ಯಕ್ಷರಾಗಿ ದ್ವಾರಕಾ ಮೆಡಿಕಲ್ಸ್ ನ ಉಮೇಶ್ ರಾವ್, ಕೋಶಾಧಿಕಾರಿಯಾಗಿ ಗಣೇಶ್ ಫಾರ್ಮಾದ ಗಣೇಶ, ಜೊತೆಕಾರ್ಯದರ್ಶಿಯಾಗಿ ಆದರ್ಶ ಮೆಡಿಕಲ್ಸ್ ಕಲ್ಲುಗುಂಡಿ ಇದರ ಮಾಲಕರಾದ ತೀರ್ಥಾನಂದ ಆಯ್ಕೆಗೊಂಡರು.
ಸಲಹೆಗಾರರಾಗಿ ಭಾರತ್ ಮೆಡಿಕಲ್ಸ್ ನ ಪ್ರಭಾಕರ್, ಸ್ವಾತಿ ಮೆಡಿಕಲ್ಸ್ ಪಂಜ ಇದರ ಮಾಲಕರಾದ ಶಶಿಧರ್ ಪಳಂಗಾಯ, ಪಾರ್ವತಿ ಮೆಡಿಕಲ್ಸ್ ಗುತ್ತಿಗಾರಿನ ಮರಿಯಪ್ಪ, ಸುವಾಚ ಮೆಡಿಕಲ್ಸ್ ನ ವೆಂಕಟೇಶ್, ಗಣೇಶ್ ಮೆಡಿಕಲ್ಸ್ ಕಲ್ಲುಗುಂಡಿ ಇದರ ಮಾಲಕರಾದ ಸುರೇಶ್ ಇವರನ್ನು ನಿಯೋಜಿಸಲಾಯಿತು.
ಜು.23 ರಂದು ಸುಳ್ಯದ ಮಯೂರಿ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.