ಕೆ.ಎಫ್.ಡಿ.ಸಿ ಉದ್ಯೋಗಿ ಗೋವಿಂದ ಮಣಿಯಣಿ ನಿವೃತ್ತಿ

0

ಸುಳ್ಯ ಕೆ.ಎಫ್.ಡಿ.ಸಿ ಉದ್ಯೋಗಿ ಗೋವಿಂದ ಮಣಿಯಣಿ ಸುದೀರ್ಘ 36 ವರ್ಷ ಸೇವೆಗೈದು ಜುಲೈ 31ರಂದು ನಿವೃತಿಯಾಗಲಿದ್ದಾರೆ.

ಇವರು ಮೂಲತಃ ದುಗಲಡ್ಕದ ಕೊಡಂಚ್ಚಿಯಡ್ಕ ನಿವಾಸಿಯಾಗಿದ್ದು, ಕೊಯಿಕುಳಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡಿ, ನಂತರ 1982ರಲ್ಲಿ ಕೆ. ಎಫ್. ಡಿ. ಸಿ ಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡು, ಅದೇ ವರ್ಷ ನವೆಂಬರ್ 12ರಂದು ವಾಹನದ ಕ್ಲಿನರ್ ಹುದ್ದೆಗೆ ಸೇರ್ಪಡೆಗೊಂಡರು.

ನಂತರ 1996ರಲ್ಲಿ ಬಡ್ತಿ ಹೊಂದಿ ಚಾಲಕ ಹುದ್ದೆಗೆ ನಿಯುಕ್ತಿಗೊಂಡರು. ನಂತರ 2016 ರಲ್ಲಿ ಹಿರಿಯ ಚಾಲಕರಾಗಿ ಬಡ್ತಿ ಹೊಂದಿ, ಜುಲೈ 31 ರಂದು ನಿವೃತಿ ಹೊಂದಲಿದ್ದಾರೆ. ಇವರು ದಿ. ಅಪ್ಪು ಮಾಣಿಯಣಿ ಮತ್ತು ದಿ. ಚೋಯಿಚ್ಚಿ ದಂಪತಿಗಳ ಮಗನಾಗಿ ಜನಿಸಿದರು.

ಪತ್ನಿ ಪ್ರಭಾವತಿ, ದುಬೈಯಲ್ಲಿ ಉದ್ಯೋಗದಲ್ಲಿರುವ ಪುತ್ರರಾದ ಜಯಪ್ರಕಾಶ್, ಜಯಚಂದ್ರ, ನವೀನ್ ಕುಮಾರ್ ಹಾಗೂ ಸೊಸೆಯಂದಿರಾದ ಕಾವ್ಯ ಶ್ರೀ, ಅನಿತಾ, ಸೌಮ್ಯರವರೊಂದಿಗೆ ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕಪದವಿನಲ್ಲಿ ನೆಲೆಸಿರುತ್ತಾರೆ.