ಸುಳ್ಯ: ರೈಟ್ ಟು ಲಿವ್ ಸಂಸ್ಥೆಯಿಂದ ದ್ವಿತೀಯ ಬ್ಯಾಚಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

0

ರೈಟ್ ಟು ಲಿವ್ (ಕೋಟೆ ಫೌಂಡೇಶನ್) ಹಾಗೂ ಸ್ನೇಹ ಶಾಲೆಯ ಸಹಯೋಗಿತ್ವದಲ್ಲಿ ನಡೆಯುತ್ತಿರುವ ‘ಸ್ಫೂರ್ತಿ ಕೌಶಲ್ಯ ತರಬೇತಿ ಕೇಂದ್ರ’ದಿಂದ ಉಚಿತ ಕಂಪ್ಯೂಟರ್ ತರಬೇತಿ ಪಡೆದ ದ್ವಿತೀಯ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಜುಲೈ 28 ರಂದು ವಿತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಉಪಸ್ಥಿತರಿದ್ದು ಕಂಪ್ಯೂಟರ್ ಶಿಕ್ಷಣದ ಮಹತ್ವಗಳ ಬಗ್ಗೆ ಮಾತನಾಡಿದರು. ರೈಟ್ ಟು ಲಿವ್ ನ ನಿರ್ದೇಶಕರಾದ ಶ್ರೀಧರ್ ಟಿ‌.ವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಮೇಶ್, ವೀರೇಶ್, ಮಲ್ಲಿಕಾರ್ಜುನ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಫೂರ್ತಿ ಕೌಶಲ್ಯ ತರಬೇತಿ ಕೇಂದ್ರದ ಕೋ-ಆರ್ಡಿನೇಟರ್ ವೆಂಕಟರಾಜ, ಶೈಲಶ್ರೀ, ಪ್ರದೀಪ್ ರೈಟ್ ಟು ಲಿವ್ ಹಾಗೂ ದ್ವಿತೀಯ ಬ್ಯಾಚ್ ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗಸ್ಟ್ ಮೊದಲ ವಾರದಿಂದ ತೃತೀತ ಬ್ಯಾಚ್ ಆರಂಭಗೊಳ್ಳಲಿದ್ದು, ಉಚಿತ ತರಬೇತಿಯನ್ನು ಪಡೆಯಲಿಚ್ಚಿಸುವವರು 9916087028 ಗೆ ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.