ಸುಳ್ಯಕ್ಕೆ ನೂತನ ಉಪತಹಶೀಲ್ದಾರ್ ಆಗಿ ಮಂಜುನಾಥ್

0

ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಮಂಜುನಾಥ್ ಕೆ.ಎಂ. ರವರಿಗೆ ಸುಳ್ಯ ತಾಲೂಕು ಕಚೇರಿಗೆ ನೂತನ ಉಪತಹಶೀಲ್ದಾರ್ ಆಗಿ ವರ್ಗಾವಣೆಯಾಗಿದೆ.

ಸುಳ್ಯ ತಾಲೂಕು ಕಚೇರಿಯಲ್ಲಿ ದ್ವಿ ದ ಸಹಾಯಕರಾಗಿದ್ದ ಅವರು 2015 ರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು.

ಅಲ್ಲಿ ಪ್ರಮೋಷನ್ ಆಗಿ ಕಚೇರಿ ಅಧೀಕ್ಷಕರಾಗಿದ್ದರು. ಇಂದು ಸುಳ್ಯಕ್ಕೆ ಬಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.