ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್‌ನಿಂದ ತಡೆ:ಸುಳ್ಯ ಬ್ಲಾಕ್ ಕಾಂಗ್ರೆಸ್ ಸ್ವಾಗತ – ಸತ್ಯಕ್ಕೆ ಸಂದ ಜಯ : ಪಿ.ಸಿ.

0

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಚರಿತ್ರೆ : ಜೆ.ಪಿ.ರೈ

ಕಾಂಗ್ರೆಸ್ ಸರಕಾರದ ಬಂದ ಬಳಿಕ 110 ಕೆ.ವಿ. ಕಾಮಗಾರಿಗೆ ಚಾಲನೆ : ಪಿ.ಎಸ್.ಜಿ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹ ಮಾಡಿದ ಮತ್ತು ವಿಧಿಸಿದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸತ್ಯಕ್ಕೆ ಸಿಕ್ಕಿದ ಜಯ. ನ್ಯಾಯಾಲಯ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಹೇಳಿದ್ದಾರೆ.


ಆ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಸಂಸತ್‌ನಲ್ಲಿ ಧ್ವನಿ ಎತ್ತುವುದನ್ನು ನಿಲ್ಲಿಸುವ ಉzಶದಿಂದ ಅವರನ್ನು ಅನರ್ಹ ಮಾಡಲಾಗಿತ್ತು. ಅವರಿಗೆ ಶಿಕ್ಷೆಯೂ ಆಗಿತ್ತು. ಇದೀಗ ಆ ಶಿಕ್ಷೆಗೆ ನ್ಯಾಯಾಲಯ ತಡೆ ನೀಡಿದೆ. ಇದೀಗ ಮತ್ತೆ ಅವರು ಸಂಸತ್‌ನಲ್ಲಿ ಸತ್ಯದ ಪರ ಧ್ವನಿ ಎತ್ತಲಿದ್ದಾರೆ ಎಂದು ಅವರು ಹೇಳಿದರು.


ಮಣಿಪುರ ಘಟನೆ ತಡೆಯಲು ವಿಫಲ : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಘಟನೆಯನ್ನು ತಡೆಯುವಲ್ಲಿ ಅಲ್ಲಿಯ ಬಿಜೆಪಿ ಸರಕಾರ ಹಾಗೂ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಅಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಅಲ್ಲಿಯ ಸರಕಾರಗಳು ಕೆಲಸ ಮಾಡಲಿ ಎಂದು ಪಿ.ಸಿ. ಜಯರಾಮರು ಹೇಳಿದರು.


ಅಡಿಕೆ ಎಲೆ ಹಳದಿ ರೋಗದ ವಿಚಾರವಾಗಿ ಮೊನ್ನೆ ಮಂಗಳೂರಿಗೆ ಮುಖ್ಯಮಂತ್ರಿಗಳು ಬಂದಾಗ ಪಕ್ಷದ ಜಿಲ್ಲಾ ನಾಯಕರು ಅವರೊಂದಿಗೆ ಮಾತನಾಡಿದ್ದಾರೆ ಎಂದು ಜಯರಾಮ್ ಹೇಳಿದರು.


ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಶಕ್ತಿಯೋಜನೆ, ಅನ್ನಭಾಗ್ಯ ಯೋಜನೆ ಈಗಾಗಲೇ ನೀಡಲಾಗುತ್ತಿದ್ದು, ಗೃಹಜ್ಯೋತಿಗೆ ಚಾಲನೆ ನೀಡಲಾಗಿದೆ. ಆ.೧೫ ರಂದು ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಹೇಳಿದ ಅವರು ಈ ಯೋಜನೆಯನ್ನು ಮನೆ ಮನೆಗೆ ತಲುಪಿಸಲು ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.


ಗ್ಯಾರಂಂಟಿ ಯೋಜನೆ ಚರಿತ್ರೆ ಸೃಷ್ಠಿಸಿದೆ. ದೊಡ್ಡ ಯೋಜನೆ. ಇದು ಜಾರಿ ಆಗುವುದೇ ಇಲ್ಲ ಎಂಬ ಕೇಳಿ ಬರುತ್ತಿತ್ತು. ಆದರೆ ಈಗ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿzವೆ. ಯಾವುದೇ ಯೋಜನೆಗಳು ಆರಂಭ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಆಗುವುದು ಸಹಜ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಉತ್ತರಿಸಿದರು.


೧೧೦ ಕೆ.ವಿ. ಕಾಮಗಾರಿಗೆ ಪ್ರಯತ್ನ ಮಾಡಲಾಗಿದ್ದು, ಕಾಮಗಾರಿ ಆರಂಭ ಆಗುತ್ತದೆ. ಗುತ್ತಿಗೆದಾರರು ಬಂದು ಸೈಟ್ ಪರಿಶೀಲನೆ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ಕೆಲಸಕ್ಕೆ ಚಾಲನೆ ದೊರೆತಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಉತ್ತರಿಸಿದರು. ರೇಶನ್ ಕಾರ್ಡ್ ಕೊಡಬೇಕೆಂದು ಜಿಲ್ಲೆಯಲ್ಲಿ ೧೩ ಅರ್ಜಿಗಳು ಬಂದಿದೆ. ಬೆಳೆ ವಿಮೆ ಪಾವತಿಸಲು ಅವಕಾಶ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು
.

ಪತ್ರಿಕಾಗೋಷ್ಠಿಯಲ್ಲಿ ನಾಯಕಾರದ ಎಸ್.ಸಂಶುದ್ದೀನ್, ಡೇವಿಡ್ ದೀರಾ ಕ್ರಾಸ್ತ, ನಂದರಾಜ್ ಸಂಕೇಶ್, ಸುರೇಶ್ ಎಂ.ಹೆಚ್. ಇದ್ದರು.