ಯಾವುದೇ ಧರ್ಮದ ವಿರುದ್ಧ, ಧರ್ಮ ಕೇಂದ್ರಗಳ ವಿರುದ್ಧ ಈ ಹೋರಾಟವಲ್ಲ ಸೌಜನ್ಯಳ ನ್ಯಾಯಕ್ಕಾಗಿ ಇರುವ ಹೋರಾಟ: ಮಹೇಶ್ ಶೆಟ್ಟಿ ತಿಮರೋಡಿ

0

ಸುಳ್ಯದ ಮಣ್ಣಿನಿಂದಲೇ ರಾಜ್ಯದ್ಯಂತ ಹೋರಾಟಕ್ಕೆ ಸಜ್ಜು ಗೊಳ್ಳಲಿದ್ದೇವೆ ತಿಮರೋಡಿ ಆತ್ಮವಿಶ್ವಾಸದ ಮಾತು

ನಾವು ಮಾಡುತ್ತಿರುವ ಪ್ರತಿಭಟನೆಗಳು ಹೋರಾಟಗಳು ಯಾವುದೇ ಧರ್ಮ ಜಾತಿ ಪಕ್ಷ ಧಾರ್ಮಿಕ ಕೇಂದ್ರಗಳ ವಿರುದ್ಧವಲ್ಲ.ಕಳೆದ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಅಮಾನುಷವಾಗಿ ಕೊಲೆಗೈಯಪಟ್ಟ ಮುಗ್ಧ ಬಾಲೆ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ಮಾಡುವ ಹೋರಾಟ ಇದಾಗಿದೆ ಎಂದು ರಾ.ಹಿಂ.ಜಾ.ವೇದಿಕೆಯ ಸಂಚಾಲಕ ಹಾಗೂ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ‌ ತಿಮರೋಡಿ ಆ.8ರಂದು ಸುಳ್ಯದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಸುಳ್ಯದ ನಿಂತಿಕಲ್ಲಿನಿಂದ ಜಾಥಾದೊಂದಿಗೆ ಆಗಮಿಸಿ ಸುಳ್ಯ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ‌ಅವರು‌ ಮಾತನಾಡಿದರು.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮುಂಡಾಸುದಾರರ ಹೆಸರೆತ್ತಿದರೆ ನಾಚಿಕೆಯಾಗುತ್ತದೆ. ಹಾಗಾದ್ರೆ ಕಳೆದ ಹನ್ನೊಂದು ವರ್ಷಗಳಿಂದ ಸೌಜನ್ಯ ಕುಟುಂಬ ಎಷ್ಟು ಮಾನಸಿಕ ಹಿಂಸೆ ಅನುಭವಿಸಿರಬಹುದು.


ಆದ್ದರಿಂದ ಈ ಅಮಾನುಷ ಕೃತ್ಯ ಮಾಡಿದವರನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿ, ಶ್ರೀ ಚಾಮುಂಡೇಶ್ವರಿ ದೇವಿ ನೋಡಿಕೊಳ್ಳಲಿದ್ದಾರೆ.

ಈ ಎಲ್ಲಾ ದೇವತೆಗಳನ್ನು ಇಂದು ಸುಳ್ಯದಲ್ಲಿ ಸೇರಿರುವ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರಾದ ನಿಮ್ಮಲ್ಲಿ ನಾನು ಕಾಣುತ್ತಿದ್ದೇನೆ.ಆದ್ದರಿಂದ ನಿಮ್ಮೆಲ್ಲರ ಪಾಧಾರವಿಂದಕ್ಕೆ ನಮಿಸುತ್ತಾ ಈ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ ಎಂದು ಅವರು ಹೇಳಿದರು.


ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು.
ಆ ಆರೋಪಿ ನಾನೇ ಆಗಿದ್ದರು ಸರಿ ಬಿಡುವಂತಹ ಪ್ರಶ್ನೆ ಬರಬಾರದು. ತಪ್ಪು ಯಾರು ಮಾಡಿದ್ದಾರೆ ಅವರಿಗೆ ಶಿಕ್ಷೆ ದೊರೆಯಲೇಬೇಕು ಎಂದು ಒತ್ತಾಯಿಸಿದರು.