ಮಂಗಳೂರು ವಿವಿ 1998 ಮತ್ತು 1999ರ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಚಂದ್ರಕುಮಾರ್ ಕುತ್ಯಾಳ

0

ಮಂಗಳೂರು ವಿಶ್ವವಿದ್ಯಾನಿಲಯದ 1998 ಮತ್ತು 1999 ಬ್ಯಾಚಿನ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಆ. 13ರಂದು ಜನತಾ ಡಿಲಕ್ಸ್, ಪತ್ತುಮುಡಿ ಸಭಾಂಗಣ, ಬಲ್ಲಾಲ್ ಭಾಗ್, ಮಂಗಳೂರಿನಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ ಮತ್ತು ನಿರ್ದೇಶಕರು, ಅಂತರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯದ ಡಾ. ರವಿಶಂಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಹಳೆ ವಿದ್ಯಾರ್ಥಿ ಸಂಸ್ಥೆಗಳು ಯಾವುದೇ ಒಂದು ಸಂಸ್ಥೆಗೆ ಆಸ್ತಿಯಾಗಿರುತ್ತದೆ. 25 ವರ್ಷಗಳ ನಂತರ ಪ್ರಥಮ ಬಾರಿಗೆ ಎಲ್ಲರೂ ಒಟ್ಟಿಗೆ ಸೇರಿರುವುದು ಯೌವನವನ್ನು ಎತ್ತಿ ತೋರಿಸುತ್ತದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸಹಪ್ರಾದ್ಯಾಪಕರು, ಸಮಾಜಶಾಸ್ತ್ರ ವಿಭಾಗ ಮತ್ತು ನಿರ್ದೇಶಕರು ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಅನಿತಾ ರವಿಶಂಕರ್ ಭಾಗವಹಿಸಿ ವೃತ್ತಿ ಜೀವನದಲ್ಲಿ ದಕ್ಷತೆಯನ್ನು ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಮಾಜಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಮ್ಮ ಅನುಭವ -ಅಭಿಪ್ರಾಯ ವ್ಯಕ್ತಪಡಿಸಿದ್ದರು.
ವಿಶೇಷ ಅತಿಥಿಗಳಾಗಿ ಡಾ.ಶಿವಾನಂದ ಪ್ರಭು, ಪ್ರಾದ್ಯಾಪಕರು, ಶಸ್ತ್ರಚಿಕಿತ್ಸಾ ವಿಭಾಗ, ಕೆಎಂಸಿ ಮಂಗಳೂರು ಇವರು ಭಾಗವಹಿಸಿ ಪ್ರಸ್ತುತ ವೈದ್ಯರು ಹಾಗೂ ತಾಂತ್ರಿಕ ಕ್ಷೇತ್ರಗಳು ಯಾಂತ್ರಿಕವಾಗಿದ್ದು ಮಾನವೀಯ ಸಂಬಂಧಗಳು ಕಳೆದುಹೋಗುತಿದೆ. ರೋಗಿಯ ಹಾಗೂ ವೈದ್ಯನ ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಸಮಾಜಶಾಸ್ತ್ರವು ಬಹುಮುಖ್ಯ ಪಾತ್ರವನ್ನು ವಹಿಸುವುದರಲಿ ಯಾವುದೇ ಸಂಶಯವಿಲ್ಲ, ಹಾಗೂ ವೈದ್ಯಕೀಯ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಸಮಾಜಶಾಸ್ತ್ರ ಪಠ್ಯವನ್ನು ಅಳವಡಿಸುವುದು ಸೂಕ್ತ ಎಂದರು.
ಆಗಮಿಸಿದ ಅತಿಥಿಗಳನ್ನು ಶ್ರೀಮತಿ ಮಮತ ಶಿವಾನಂದ್ ಪ್ರಭು ಸ್ವಾಗತಿಸಿದರು.


ಚಂದ್ರಕುಮಾರ್ ಕುತ್ಯಾಳ ಇವರು ಪ್ರಾಸ್ತಾವಿಕವಾಗಿ ಮಾತಗಳನ್ನಾಡುತಾ ಸಮಾಜಶಾಸ್ತ್ರದ ಮಹತ್ವ ಹಾಗೂ ಈ ಸಮ್ಮೀಲನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಯಾವ ರೀತಿ ಸಹಾಯವಾಗಬಹುದು ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶ್ರೀಮತಿ. ವನಿತಾ ಶೆಟ್ಟಿ ಅಂದಿನ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಾದ್ಯಪಕರುಗಳನ್ನು ವಿದ್ಯಾರ್ಥಿಗಳು ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು. ಆಗಮಿಸಿದ ಎಲ್ಲಾ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಡಾ. ಶೇಷಪ್ಪ ಅಮೀನ್ ನಿರೂಪಿಸಿ, ಸೈಂಟ್ ಜಾರ್ಜ್ ಪಿ.ಯು ಕಾಲೇಜು ನೆಲ್ಯಾಡಿ ಇಲ್ಲಿನ ಉಪನ್ಯಾಸಕರಾದ ಮಧು ಎ. ಜೆ., ವಂದಿಸಿದರು.
ಕಾರ್ಯಕ್ರಮ ದಲ್ಲಿ 1998-1999 ಸಮಾಜಶಾಸ್ತ್ರ ಬ್ಯಾಚಿನ ವಿದ್ಯಾರ್ಥಿಗಳು, ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದು, ಸಹ ಭೋಜನ ಕೂಟದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.