ಶ್ರೀಮತಿ ಪುಷ್ಪಾವತಿ ಕೊಪ್ಪತ್ತಡ್ಕ ನಿಧನ

0

ಅಮರಪಡ್ನೂರು ಗ್ರಾಮದ ಕೊಪ್ಪತ್ತಡ್ಕ ಜಿ.ಪಿ.ನಿಲಯದ ಶ್ರೀಮತಿ ಪುಷ್ಪಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಆ.15 ರಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಅಬಕಾರಿ ಇಲಾಖೆಯ ನಿವೃತ್ತ ಉದ್ಯೋಗಿ ಗಂಗಾಧರ ಗೌಡ ,ಪುತ್ರ ಗೀತೇಂದ್ರ, ಪುತ್ರಿಯರಾದ ಶ್ರೀಮತಿ ನಮಿತಾ ಶೇಷಪ್ಪ, ಶ್ರೀಮತಿ ಲತಾ ಕಿಶೋರ್ , ಶ್ರೀಮತಿ ದಿವ್ಯ ದಿನೇಶ್ ,ಸೊಸೆ ಶ್ರೀಮತಿ ಅಂಕಿತಾ ಗೀತೇಂದ್ರ ಮತ್ತು ಮೊಮ್ಮಕ್ಕಳು ಹಾಗೂ ಕೋಡ್ತಿಲು ಕುಟುಂಬಸ್ಥರನ್ನು ಅಗಲಿದ್ದಾರೆ.