ಮರ್ಕಂಜ ಗ್ರಾಮ ಪಂಚಾಯತ್ : ಸ್ವಾತಂತ್ರ್ಯೋತ್ಸವ ಆಚರಣೆ – ಧ್ವಜಾರೋಹ-ಶಿಲಾಫಲಕ ಅನಾವರಣ

0

ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯ ಪ್ರಯುಕ್ತ ಧ್ವಜಾರೋಹಣ, ಶಿಲಾ ಫಲಕ ಅನಾವರಣ, ವನಮಹೋತ್ಸವ ಕಾರ್ಯಕ್ರಮ ಪಂಚಾಯತ್ ವಠಾರದಲ್ಲಿ‌ ನಡೆಯಿತು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರ ಗುಂಡಿ‌ ಧ್ವಜಾರೋಹಣ ನೆರವೇರಿಸಿ, ಶಿಲಾ ಫಲಕ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಪಿಡಿಒ ರವಿಚಂದ್ರ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.