ರಿಫಾಯಿ ಜುಮ್ಮಾ ಮಸೀದಿ ಸಮಹಾದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ

0

ರಿಫಾಯಿ ಜುಮ್ಮಾ ಮಸೀದಿ ಸಮಹಾದಿ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಮಸೀದಿ ಅಧ್ಯಕ್ಷರಾದ ಸಾದಿಕ್ ಸಮಹಾದಿ ರವರು ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು.

ಖತೀಬರಾದರಫೀಕ್ ‌ನಿಝಾಮಿ ಉಸ್ತಾದ್ ರವರು ಸಂದೇಶ ಭಾಷಣ ನೀಡಿದರು.ನಂತರ ಮದ್ರಸ ಮಕ್ಕಳಿಂದ ಭಾಷಣ,ಹಾಡು,ಕ್ವಿಝ್ ಸ್ಫರ್ದೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

ಸಮಾರಂಭದಲ್ಲಿ ಮಸೀದಿ ಉಪಾಧ್ಯಕ್ಷರಾದ ಆದಂ,ಕಾರ್ಯದರ್ಶಿಗಳಾದ ಫಲುಲ್,ಸಿನಾನ್,ಖಜಾಂಜಿ ಉಮರ್ ಫಾರೂಕ್ ಸದಸ್ಯರಾದ ಪಿ.ಎಂ ಅಬ್ದುಲ್ ರಹ್ಮಾನ್,ಸಾಬುಕುಂಙಿ,ಹನೀಫ್ ಸೇರಿದಂತೆ ಜಮಾಅತ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.