ಗುತ್ತಿಗಾರು : ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

0


ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ,ಗ್ರಾಮ ಪಂಚಾಯತ್ ಗುತ್ತಿಗಾರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುತ್ತಿಗಾರು, ಶಂಖಶ್ರೀ ಸ್ತ್ರೀ ಶಕ್ತಿ ಗೊಂಚಲು ಗುತ್ತಿಗಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಆ. ೧೪ ರಂದು ಗ್ರಾಮ ಪಂಚಾಯತ್ ನ ಗಿರಿಜನ ಸಭಾಭವನದಲ್ಲಿ ಗೊಂಚಲಿನ ಅಧ್ಯಕ್ಷರಾದ ಶ್ರೀಮತಿ ಸೆಲಿನಾರವರ ಅಧ್ಯಕ್ಷತೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಮತ್ತು ಆಟಿ ಉತ್ಸವವನ್ನು ಆಚರಿಸಲಾಯಿತು.


ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಧನಪತಿಯವರು ಚೆನ್ನೆಮಣೆಗೆ ಚೆನ್ನೆಕಾಯಿ ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇಲಾಖೆಯ ವಲಯ ಮೇಲ್ವಿಚಾರಕಿ ಶ್ರೀಮತಿ ವಿಜಯರವರು ಆಟಿ ತಿಂಗಳ ಮಹತ್ವ ಮತ್ತು ಆಟಿ ತಿಂಗಳಿನಲ್ಲಿ ಉಪಯೋಗಿಸುವ ಆಹಾರ ಪದಾರ್ಥಗಳ ವಿಶೇಷತೆ ಮತ್ತು ಪೌಷ್ಟಿಕತೆ ಬಗ್ಗೆ ಮಾಹಿತಿ ನೀಡಿ, ಇದರೊಂದಿಗೆ ಇಲಾಖೆಯ ಅನೇಕ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಶ್ರೀಮತಿ ಪದ್ಮವೇಣಿಯವರು ಸ್ತನ್ಯ ಪಾನ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸ್ತ್ರೀ ಶಕ್ತಿ ತಾಲೂಕು ಒಕ್ಕೂಟದ ಪ್ರತಿನಿಧಿ ಶ್ರೀಮತಿ ಅನಿತಾ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಲತಾ ಆಜಡ್ಕಯವರು ವೇದಿಕೆಯಲ್ಲಿದ್ದರು. ಗೊಂಚಲಿನ ಕಾರ್ಯದರ್ಶಿಯವರಾದ ಶ್ರೀಮತಿ ದಿವ್ಯ ಎಂ. ಜಿ, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಶ್ರೀಧರ್, ಜತೆ ಕಾರ್ಯದರ್ಶಿಯವರಾದ ಮಾಲತಿ ಮೆಟ್ಟಿ ನಡ್ಕರವರು ಹಾಜರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರೀಮತಿ ರೇವತಿ ವಳಲಂಬೆಯವರು ಕಾರ್ಯಕ್ರಮ ನಿರೂಪಿಸಿದರು. ಮೆಟ್ಟಿನಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಮಲರವರು ಪ್ರಾರ್ಥಿಸಿ , ಶ್ರೀಮತಿ ಲಲಿತಾ ಶ್ರೀಧರ್ ಸ್ವಾಗತಿಸಿ, ಶ್ರೀಮತಿ ಶುಭಲಕ್ಷ್ಮಿಯವರು ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಜರಿದ್ದರು.