ಬೆಳ್ಳಾರೆ ಲಯನ್ಸ್ ಕ್ಲಬ್ ವತಿಯಿಂದ ಬೆಳ್ಳಾರೆ ಎಸ್.ಐ‌. ಸಂತೋಷ್ ಬಿ.ಪಿ.ಯವರಿಗೆ ಸನ್ಮಾನ

0

ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡಿರುವ ಪಿ.ಎಸ್.ಐ ಸಂತೋಷ್ ಬಿ.ಪಿ ಯವರನ್ನು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ ಆ. 15ರಂದು ಸ್ವಾಗತಿಸಿ ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಲ. ವಿಟ್ಟಲ್ ಶೆಟ್ಟಿ ಪೆರ್ವಾಜೆ ಹೂಗುಚ್ಚ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಲ. ದಯಾನಂದ ನಾಯ್ಕ್ ಮಠತಡ್ಕ, ಕೋಶಾಧಿಕಾರಿ ಲ. ಪದ್ಮನಾಭ ಶೆಟ್ಟಿ ಪೆರ್ವಾಜೆ ಉಪಸ್ಥಿತರಿದ್ದರು.