ಗಾಯಕ ಪೆರುಮಾಳ್ ಲಕ್ಷ್ಮಣ್ ರವರು ರಚಿಸಿದ ಗುರು ವಂದನೆ ಭಕ್ತಿಗೀತೆ ಧ್ವನಿಸುರುಳಿ ಶಿವಮೊಗ್ಗದಲ್ಲಿ ಬಿಡುಗಡೆ

0

ಶಿವಮೊಗ್ಗದ ಸರಕಾರಿ ನೌಕರರ ಭವನದಲ್ಲಿ ಶ್ರೀ ರೋಜಾ ಸ್ವಾಮೀಜಿ ಅವರ ಪ್ರಥಮ ವರ್ಷದ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಸುಳ್ಯದ ಐವರ್ನಾಡು ಪೆರುಮಾಳ್ ಲಕ್ಷ್ಮಣ್ ರವರು ಸಾಹಿತ್ಯ ಬರೆದು ಹಾಡಿದ ಗುರು ವಂದನೆ ಭಕ್ತಿಗೀತೆ ಧ್ವನಿ ಸುರುಳಿಯನ್ನು ಶ್ರೀ ರೋಜಾ ಷಣ್ಮುಗಂ ಟ್ರಸ್ಟ್ ಅಧ್ಯಕ್ಷರಾದ ಶಬರೀಶ ಗುರುಸ್ವಾಮಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್ ಎನ್. ಚನ್ನಬಸಪ್ಪ , ಮೇಯರ್ ಎಸ್ ಶಿವಕುಮಾರ , ಬಸವ ಕೇಂದ್ರದ ಡಾ.ಬಸವ ಶ್ರೀ ಮರಳಸಿದ್ಧ ಸ್ವಾಮೀಜಿ , ಗಾಯಕಿ ಪುಷ್ಪಾ ಆರ್ ಡಿ ಎಡಮಂಗಲ , ಪ್ರದ್ಯುಮ್ನ ಎಡಮಂಗಲ , ತಮಿಳುನಾಡಿನ ಹೆಸರಾಂತ ತರುತಣಿ ಇನ್ನಿತರರು ಉಪಸ್ಥಿತರಿದ್ದರು.