ಮರ್ಕಂಜ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ನೂತನ ಸಮಿತಿ‌ ರಚನೆ

0

ಏಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಆ.15ರಂದು ಮರ್ಕಂಜ ಗ್ರಾಮದ ಗೋಳಿಯಡ್ಕದ ಜಗದೀಶ್ ಬಲ್ಕಾಡಿ ಅವರ ಮನೆಯಲ್ಲಿ ನಡೆಯಿತು.

ನೂತನವಾಗಿ ಅಧ್ಯಕ್ಷರಾಗಿ ವಿಖ್ಯಾತ ರೈ ಪಾರೆಪ್ಪಾಡಿ, ಉಪಾಧ್ಯಕ್ಷರಾಗಿ ದಿಲೀಪ್ ಕುಮಾರ್ ಬಲ್ಕಾಡಿ, ಕಾರ್ಯದರ್ಶಿಯಾಗಿ ಬಾಲಚಂದ್ರ ಗುರುಂಪು,
ಜತೆಕಾರ್ಯದರ್ಶಿಯಾಗಿ ತೀರ್ಥರಾಮ್ ಕೊಚ್ಚಿ ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ರೇಣುಕಾ ಪ್ರಸಾದ್ ಬಲ್ಕಾಡಿ ಉಪಾಧ್ಯಕ್ಷ ನವೀನ್ ಅಳವುಪಾರೆ ಹಾಗೂ ಕಾರ್ಯದರ್ಶಿ ಉಮೇಶ್ ಪಲ್ಲತ್ತಡ್ಕ ಜೊತೆ ಕಾರ್ಯದರ್ಶಿ ಹೇಮಪಾಲ ಅರ್ಜಿಕಜೆರವರು ನೂತನ‌ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.