ಸುಳ್ಯ ಎನ್ನೆoಪಿಯುಸಿಯಲ್ಲಿ ಮಾಹಿತಿ ಕಾರ್ಯಾಗಾರ

0


ವಿಶ್ವದ 2ಮಿಲಿಯನ್ ಮಂದಿ ಮಾತನಾಡುವ ಭಾಷೆ ಇಂಗ್ಲೀಷ್. ಜ್ಞಾನ ಸಂಗ್ರಹದ ಮಾಹಿತಿಯ ಮೂಲದ ಹೆಚ್ಚಿನ ಗ್ರಂಥಗಳು ಇಂಗ್ಲೀಷ್ ನಲ್ಲಿ ಲಭಿಸುತ್ತದೆ. ನಮ್ಮ ವಿಚಾರಗಳನ್ನು ವ್ಯಕ್ತ ಪಡಿಸಲು, ಶಿಕ್ಷಣ ವ್ಯವಸ್ಥೆಯಲ್ಲಿ, ಉದ್ಯೋಗ, ವ್ಯಾವಹಾರಿಕ ಹಾಗೂ ಹೆಚ್ಚಿನ ದೇಶಗಳಲ್ಲಿ ಆಡಳಿತ ಕ್ಷೇತ್ರದಲ್ಲಿ ಇಂಗ್ಲೀಷ್ ಬಳಕೆಯಲ್ಲಿದ್ದು ನಮ್ಮ ದೈನಂದಿನ ಬದುಕಿನಲ್ಲಿ ಸಂವಹನ ಭಾಷೆಯಾಗಿ ಇಂಗ್ಲೀಷ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತರಬೇತುದಾರರಾದ ಸರಸ್ವತಿ ಸಿ.ಕೆ. ಅವರು ಹೇಳಿದರು.


ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ Beyond the text book to the world ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಮಾತನಾಡಿ ವಿದ್ಯಾರ್ಥಿಗಳು ಜ್ಞಾನಾಭಿವೃದ್ಧಿಗಾಗಿ ವಿವಿಧ ಭಾಷೆಗಳ ಮೂಲಕ ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ, ಕಾರ್ಯಕ್ರಮ ಸಂಯೋಜಕಿ, ಆಂಗ್ಲ ಭಾಷಾ ಉಪನ್ಯಾಸಕಿ ಪ್ರೇಮಲತಾ ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಜ್ಞಾ ಮತ್ತು ಬಳಗದವರು ಪ್ರಾರ್ಥಿಸಿ, ಅಮೋಘ ಎಂ‌.ಎಸ್ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಪ್ರೇಮಲತಾ ಎ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಆಯಿಷತ್ ಅಸ್ನ ಎ.ಆರ್ ಕಾರ್ಯಕ್ರಮ ನಿರೂಪಿಸಿ, ರಿಯಾ ಕೆಜೆ ವಂದಿಸಿದರು.