ಸುಳ್ಯದಲ್ಲಿ ಬೆಳ್ಳಂಬೆಳಗ್ಗೆ ಹಣದ ಬೇಡಿಕೆ ಇಟ್ಟ ನಯ ವಂಚಕ

0

ಈಗ ಏಳುವರೆ ಸಾವಿರ ಕೊಡಿ, ಮತ್ತೆ 1.5 ಲಕ್ಷ ಕೊಡುತ್ತೇನೆಂದು ನಂಬಿಸಿ ಅಪರಿಚಿತನಿಂದ ವಂಚಿಸುವ ಪ್ರಯತ್ನ

ಸುಳ್ಯದ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ವ್ಯಕ್ತಿ ಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಹಣದ ಬೇಡಿಕೆ ಇರಿಸಿ ಮತ್ತೆ ಬ್ಯಾಂಕಿನಿಂದ ಹಣ ತೆಗೆದುಕೊಡುವುದಾಗಿ ಹೇಳಿ ವಂಚಿಸಲು ಪ್ರಯತ್ನಿಸಿದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.

ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಅಪ್ಪಯ್ಯ ನೀರಬಿದಿರೆ ಎಂಬವರು ಟೈಲರ್ ವೃತ್ತಿ ನಡೆಸುತ್ತಿದ್ದು ಇಂದು ಬೆಳಗ್ಗೆ 8.30 ರ ಹೊತ್ತಿಗೆ ಮಲಯಾಳಂ ಭಾಷೆ ಮಾತನಾಡುವ ಅಪರಿಚಿತರೊಬ್ಬರು ಬಂದು ನನಗೆ ನಿಮ್ಮ ಪರಿಚಯ ಇದೆ. ನಾನು ನಿಮ್ಮ ಬಳಿ ಹಿಂದೆಯೂ ಬಂದು ಮಾತನಾಡಿಸಿದ್ದೇನೆ. ನಿಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ಕಡೆಯವರು ನನಗೆ ಸಂಬಧಿಕರು ಎಂದು ಹೇಳಿದ್ದಾನೆ. ಇವತ್ತು ನನಗೆ ಬ್ಯಾಂಕಿಗೆ 1.5 ಲಕ್ಷ ಪ್ರಧಾನಿ ಮೋದಿಯವರ ಹಣ ಬಿಡುಗಡೆಯಾಗಲಿದೆ. ಈಗ ನಾನು ತುರ್ತಾಗಿ 7.5 ಸಾವಿರ ಬ್ಯಾಂಕಿಗೆ ಪಾವತಿ ಮಾಡಬೇಕಾಗಿದೆ. ನಿಮ್ಮ ಬಳಿ ಹಣ ಇದ್ದರೆ ಈಗ ನನಗೆ 7.5 ಸಾವಿರ ಕೊಡಿ. ಬ್ಯಾಂಕಿನಿಂದ ಹಣ ಬಿಡುಗಡೆಯಾದ ಕೂಡಲೇ ನಿಮಗೆ ಹಿಂತಿರುಗಿಸುತ್ತೇನೆ ಎಂದು ಹೇಳಿದ್ದಾನೆ. ನಾನು ಕೆನರಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿ ನಂಬಿಸಲು ಪ್ರಯತ್ನಿಸಿದ್ದಾನೆ.


ಅಪ್ಪಯ್ಯರಿಗೆ ಆತನ ಮಾತಿನಲ್ಲಿ ನಂಬಿಕೆ ಬಾರದೆ ತಕ್ಷಣ ಅವರ ಮಗಳಿಗೆ ದೂರವಾಣಿ ಕರೆ ಮಾಡಿ ಕೇಳಿದರು. ಗಂಡನ ಪೈಕಿ ಕೆನರಾ ಬ್ಯಾಂಕ್ ಉದ್ಯೋಗಿ ಯಾರು‌ ಇದ್ದಾರೆ ಎಂದು ಕೇಳಿದಾಗ ಅಂತಹವರು ನಮ್ಮವರ ಪೈಕಿ ಯಾರು ಇಲ್ಲ ಎಂದು ತಿಳಿಸಿದರು.
ಮೋಸ ಹೋಗುವ ಬಗ್ಗೆ ತಿಳಿದ ಅಪ್ಪಯ್ಯ ರವರು ನನ್ನ ಬಳಿ ಹಣ ಇಲ್ಲ. ನಿಮ್ಮ ಪರಿಚಯ ನನಗೆ ಇಲ್ಲವೆಂದು ಹೇಳುತ್ತಾರೆ. ಹಣ ಸಿಗುವುದಿಲ್ಲವೆಂದು ಮನಗಂಡ ವಂಚಕ ಅಲ್ಲಿಂದ ಎಸ್ಜೇಪ್ ಆಗಿರುತ್ತಾನೆ‌. ಅಪರಿಚಿತ ವ್ಯಕ್ತಿ ಯಾರಾಗಿರಬಹುದೆಂದು ಕಾಂಪ್ಲೆಕ್ಸ್ ನಲ್ಲಿ ಇರುವ ಸಿ.ಸಿ.ಫೂಟೇಜ್ ವೀಕ್ಷಿಸಿದಾಗ ಅವನ ಪೂರ್ಣ ಚಿತ್ರ ಗೋಚರಿಸುತ್ತಿಲ್ಲ.
ನೀಳ ಕಾಯದ ಕಪ್ಪು ಬಣ್ಣ ಹೊಂದಿದ್ದು ಮಲಯಾಳಂ ಭಾಷೆಯಲ್ಲಿ ಮಾತಾನಾಡುವವನಾಗಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಸುಳ್ಯದ ಹಲವಾರು ಕಡೆಗಳಲ್ಲಿ ಇಂತಹ ವಂಚನೆ ಪ್ರಕರಣಗಳು ಮರುಕಳಿಸುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ
ವ್ಯವಹರಿಸಬೇಕಾಗಿದೆ.