ಸೆ.03 : ಬೆಳ್ಳಾರೆಯಲ್ಲಿ 169 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ

0

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ,ಯುವವಾಹಿನಿ ಸುಳ್ಯ ಘಟಕ ಮತ್ತು ಬಿರುವೆರ್ ಕುಡ್ಲ ಸುಳ್ಯ ಘಟಕ ಹಾಗೂ ಬಿಲ್ಲವ ಮಹಿಳಾ ಘಟಕ ಸುಳ್ಯ ಇವರ ಜಂಟಿ ಆಶ್ರಯದಲ್ಲಿ 169 ನೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ ಕಾರ್ಯಕ್ರಮವು ಸೆ.03 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.


ಪುರೋಹಿತ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಲಿದೆ.ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸುಳ್ಯ ಇದರ ಅಧ್ಯಕ್ಷ ಎನ್.ಎಸ್.ಡಿ.ವಿಠಲದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.


ಕಲಾವಿದ,ನಿರೂಪಕರಾದ ರಾಜೇಶ್ ಎಸ್.ಬಲ್ಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ತಹಶೀಲ್ದಾರ್ ಮಂಜುನಾಥ,ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ,ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷ ಜನಾರ್ಧನ ಪೂಜಾರಿ ಅಲೆಕ್ಜಾಡಿ ಅತಿಥಿಗಳಾಗಿ ಉಪಸ್ಥಿತರಿರುವರು.


ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಸಂಜೀವ ಪೂಜಾರಿ ಕೊಲ್ಯ, ಮೂರ್ತೆದಾರರ ಕ್ಷೇತ್ರದಲ್ಲಿ ದೇರಣ್ಣ ಪೂಜಾರಿ ದಾಸನಮಜಲು,ಕೋಟಿಚೆನ್ನಯ್ಯ ಗರಡಿಯಲ್ಲಿ ಚಾಕರಿ ಕೆಲಸ ಮಾಡುವ ಕೋಟಿ ಪೂಜಾರಿ ಕುಬಲಾಡಿ, ದೈವದ ಪಾರಿಕೆ ಧರ್ಮಪಾಲ ಪೂಜಾರಿ ಶೇಣಿ, ದೈವಾರಾಧಕ ಕೃಷ್ಣಪ್ಪ ಪೂಜಾರಿ ಬೇಳ್ಯ, ಉದ್ಯಮ ಕ್ಷೇತ್ರದಲ್ಲಿ ವಸಂತ ಪೂಜಾರಿ ಸಾರಕರೆ ಪೆರುವಾಜೆ, ತುಳುಲಿಪಿ ಸಾಧಕ ಪ್ರದೀಪ್ ಪೂಜಾರಿ ಕೊಯಿಲ ರವರನ್ನು ಸನ್ಮಾನಿಸಲಾಗುವುದು.
ಎಸ್.ಎಸ್.ಎಲ್.ಸಿಯಲ್ಲಿ 622 ಅಂಕದೊಂದಿಗೆ ರಾಜ್ಯದಲ್ಲಿ 4 ನೇ ಸ್ಥಾನ ಪಡೆದ ದ್ವಿತಿ ಎಸ್.ಸಾರಕರೆಯವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಬಿಲ್ಲವ ಸಮಾಜದ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಎನ್.ಎಸ್.ಡಿ.ವಿಠಲದಾಸ್ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ ತಿಳಿಸಿದ್ದಾರೆ.