ನಗರದಲ್ಲಿ ನೀರು‌ ಸರಬರಾಜಿನಲ್ಲಿ ವ್ಯತ್ಯಯ : ಸುಳ್ಯ ನ.ಪಂ. ಮಾಹಿತಿ

0

ಸುಳ್ಯ ನಗರ ಪಂಚಾಯತ್ ನ ಕಲ್ಲುಮುಟ್ಲು ನೀರೆತ್ತುವ ಘಟಕದಲ್ಲಿರುವ 50hp ಮೋಟಾರ್ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದು ಕೇವಲ ಒಂದು ಪಂಪ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಈ ಕಾರಣದಿಂದ ನಗರದಲ್ಲಿ ಸೋಮವಾರದವರೆಗೆ ನೀರು ಸರಬರಾಜು ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಲು ನಗರ ಪಂಚಾಯತ್ ಪ್ರಕಟಣೆ ತಿಳಿಸಿದೆ.