ನಾರ್ಣಕಜೆ : ಮರದಿಂದ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

0

ನಾರ್ಣಕಜೆ ಪರಿಸರದಲ್ಲಿ ಸ್ಥಳೀಯ ನಿವಾಸಿಯೋರ್ವರ ಮನೆಯಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಆಗಸ್ಟ್ 27ರಂದು ಸಂಜೆ ವರದಿಯಾಗಿದೆ.


ಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ನಾರ್ಣಕಜೆ ನಿವಾಸಿ ರೋಬರ್ಟ್ ಡಿಸೋಜ ಎಂಬುವವರಾಗಿದ್ದು,
ಇಂದು ಪಕ್ಕದ ಮನೆಯವರ ಜಾಗದಲ್ಲಿ ಮರ ಕಡಿಯುವ ಕೆಲಸಕ್ಕೆ ಹೋಗಿದ್ದು ಮರದಿಂದ ಇಳಿಯುತ್ತಿದ್ದ ಸಂದರ್ಭ ಆಯ ತಪ್ಪಿ ಕೆಳಗೆ ಬಿದ್ದು ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ.

ಕೂಡಲೇ ಸ್ಥಳೀಯರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆ ದಾಖಲಿಸಿ ನಂತರ ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದು ತುರ್ತು ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.