ಮೈಸೂರು ಜಿಲ್ಲಾವಾರು ಯೋಗಾಸನ ಸ್ಪರ್ಧೆಯಲ್ಲಿ ಸೋನ ಅಡ್ಕಾರು ಪ್ರಥಮ

0

ರಾಜ್ಯಮಟ್ಟದ ಯೋಗ ಕ್ರೀಡಾಕೂಟಕ್ಕೆ ಆಯ್ಕೆ

ನ್ಯಾಷನಲ್ ಯೋಗ ಸ್ಪೋರ್ಟ್ಸ್ ಫೌಂಡೇಶನ್ ನವರು ನಡೆಸಿದ 2023-24ನೇ ಮೈಸೂರು ಜಿಲ್ಲಾವಾರು ಯೋಗಾಸನ ಕ್ರೀಡಾಸ್ಪರ್ಧೆಯಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರಿನ ಸೋನ ಅವರು ಭಾಗವಹಿಸಿ, ಪ್ರಥಮ ಬಹುಮಾನ ಪಡೆದುಕೊಂಡಿದ್ದು, ರಾಜ್ಯಮಟ್ಟದ ಯೋಗ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಜಿಲ್ಲಾವಾರು ಯೋಗಾಸನ ಕ್ರೀಡಾ ಸ್ಪರ್ಧೆಯು ಮೈಸೂರಿನ ಯೋಗಧಾಮ ಸಭಾಭವನದಲ್ಲಿ ನಡೆಯಿತು.

ಯೋಗಾಸನದ 3ರಿಂದ 14 ವರ್ಷ ವಯೋಮಿತಿಯ ಹುಡುಗಿಯರ ಟ್ರೆಡೀಷನಲ್ ಯೋಗ ಕ್ರೀಡಾ ಸ್ಪರ್ಧೆಯಲ್ಲಿ ಸೋನ ಅಡ್ಕಾರು ಅವರು ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಜೊತೆಗೆ ಆರ್ ಟಿಸ್ಟಿಕ್ ಸೋಲೋ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ, ಚತುರ್ಥ ಸ್ಥಾನ ಪಡೆದಿದ್ದಾರೆ.
ಈಕೆ ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಯ ಪುತ್ರಿ.

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ನಿ. ಸುಳ್ಯದ ಯೋಗೇನ ಚಿತ್ತಸ್ಯ ಯೋಗಕೇಂದ್ರದ ಯೋಗಶಿಕ್ಷಕ ಸಂತೋಷ್ ಮುಂಡಕಜೆ ಹಾಗೂ ಶ್ರೀಮತಿ ಪ್ರಶ್ವಿಜ ಸಂತೋಷ್ ಅವರ ಶಿಷ್ಯೆ.
ಸೋನ ಅವರು ನ್ಯಾಷನಲ್ ಯೋಗ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಅಕ್ಟೋಬರ್ ನಲ್ಲಿ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.