ಸೆ.9: ಸಂಪಾಜೆ ಸಹಕಾರಿ ಸಂಘದ ವತಿಯಿಂದ ಆಸಕ್ತ ಕೃಷಿಕರಿಗೆ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರ

0

 ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆಸಕ್ತ ಕೃಷಿಕರಿಗಾಗಿ  ಕಸಿಕಟ್ಟುವ ಹಾಗೂ ಗಿಡ ಸವರುವ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಾಗಾರವು ಸೆ.9ರಂದು ಜರುಗಲಿದೆ.

ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ಜರುಗಲಿದ್ದು, ಗಿಡ ಸವರುವಿಕೆಯ ಪ್ರಾತ್ಯಕ್ಷಿಕೆ ತರಬೇತಿಯು ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರ ಕೃಷಿ ತೋಟದಲ್ಲಿ ಬೆಳಿಗ್ಗೆ ಜರುಗಲಿದೆ.
ಕಸಿ ಕಟ್ಟುವಿಕೆಯ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ, ಸಂವಾದವು ಬೆಳಿಗ್ಗೆಯಿಂದ ಸಂಜೆಯವರೆಗೆ ಜರುಗಲಿದೆ.