ಗುರು ನಮನ : ಅಮ್ಮನೆಂಬ ಗುರು-ಗುರುವೆಂಬ ಅಮ್ಮ

0

ಅಶ್ವಿನಿ ಎಂ.ಕೆ. ಶಿವಾಜಿನಗರ

ನನ್ನ ನೆಚ್ಚಿನ ಗುರುಗಳಾದ ವಿದ್ಯಾಶಂಕರಿ ಎಸ್…
ನನ್ನಲ್ಲಿರುವ ಉತ್ತಮವಾದುದನ್ನು ಹೊರತರಲು ನೀವು ಮಾಡಿದ ಎಲ್ಲಾ ಪ್ರಯತ್ನಗಳು ಹಾಗು ಕಠಿನ ಪರಿಶ್ರಮವನ್ನು ಕೇವಲ ಪದಗಳಲ್ಲಿ ಮರುಪಾವತಿಸಲಾಗುವುದಿಲ್ಲ.


ನಿಮ್ಮಂತಹ ಗುರುವನ್ನು ಹೊಂದಿದಕ್ಕಾಗಿ ನಾನು ಕೃತಜ್ಞತಲಾಗಿರುತ್ತೇನೆ.
ನಾನು ನನ್ನ ಎಲ್ಲ ಗುರುಗಳನ್ನು ಪ್ರೀತಿಸುತ್ತೇನೆ. ಆದರೆ ಅದರಲ್ಲಿ ನನ್ನ ನೆಚ್ಚಿನ ಗುರುಗಳಾದ ನೀವು ಸರ್ಕಾರಿ ಪ್ರೌಢ ಶಾಲೆ ಅಜ್ಜಾವರ ಇಲ್ಲಿ ಇಂಗ್ಲೀಷ್ ವಿಷಯವನ್ನು ಭೋದನೆ ಮಾಡುತ್ತಿದ್ದಿರಿ.
ನೀವು ನನಗೆ ಅದ್ಬುತ ಭೋದನಾ ವಿಧಾನಗಳ ಜೊತೆಗೆ ನನಗೆ ಜೀವನದ ಮೌಲ್ಯಗಳನ್ನು ತಿಳಿಸಿದ್ದಿರಿ.
ನೀವು ನನಗೆ ಬರೀ ಪಠ್ಯ ಪುಸ್ತಕದಲ್ಲಿರುವುದನ್ನು ಮಾತ್ರವೇ ಕಲಿಸಿಕೊಡದೆ ಬದುಕಿನಲ್ಲಿ ಪರಿಪೂರ್ಣ ವ್ಯಕ್ತಿಯಾಗಲು ನನಗೆ ಮಾರ್ಗದರ್ಶನ ನೀಡಿದ್ದಿರಿ. ಹೊರ ಜಗತ್ತಿನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನೂ ತಿಳಿಸಿಕೊಟ್ಟಿದ್ದೀರಿ.
ನನ್ನ ಎಳಿಗೆಯನ್ನು ಸುಗಮ ಗೊಳಿಸಿದವರಲ್ಲಿ ಮೊದಲನೆಯವರು. ನನ್ನ ಜೀವನದ ಎಲ್ಲಾ ಹಂತಗಳಲ್ಲಿಯೂ ಸಹಾ ನಿಮ್ಮ ಪಾತ್ರ ಪ್ರಮುಖ.

ಸದಾ ತಾನೂ ನಗುವುದರೊಂದಿಗೆ ಇತರರನ್ನು ನಗಿಸುವ ಗುರುಗಳಾಗಿದ್ದು, ನಿರ್ಮಲ ಪರಿಸರ, ಶುದ್ಧ ನಡವಳಿಕೆ, ಪ್ರೀತಿಯ ಆವರಣ, ಇವುಗಳನ್ನು ಮುಂತಾದ ವಿಷಯಗಳಲ್ಲಿ ಬಹಳ ಕಾಳಜಿ ವಹಿಸುತ್ತಿದ್ದಿರಿ.
ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಂಡಾಗ, ಮುಂದಿನ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಿರಿ .
ನಾನು ತಪ್ಪು ಮಾಡಿದರೆ, ಅದು ಸರಿ ಅಲ್ಲ ತಪ್ಪು ಎಂದು ತಿದ್ದಿ ನನ್ನಲ್ಲೂ ಗುರಿ ಸಾಧಿಸುವ ಛಲ ತಂದು, ತಾಯಿಯ ಸ್ಥಾನದಲ್ಲಿ ನಿಂತು ಧೈರ್ಯ ತುಂಬಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದೀರಿ.
ನಿಮ್ಮ ಅತ್ಯುತ್ತಮ ಭೋಧನಾ ಶೈಲಿ, ಗಾಂಭೀರ್ಯ, ತರಗತಿ ಹೊರಗಿನ ಭಾಂದವ್ಯ, ಪ್ರೀತಿ, ಸಹನೆಯ ಗುಣ ನನಗೆ ಉತ್ತಮ ಜೀವನದ ಹಾದಿಯನ್ನು ತೋರುವಲ್ಲಿ ನೆರವಾಯಿತು
ನಿಮ್ಮ ಸರಳವಾದ ಭೋಧನೆ ಇಂದ ಸುಲಭವಾಗಿ ಪಾಠ ಅರ್ಥವಾಗುತ್ತಿತ್ತು. ನನ್ನ ಯೋಗಕ್ಷೇಮವನ್ನು ತಾಯಿಯಂತೆ ವಿಚಾರಿಸುತ್ತಿರಿ.
ನೀವು ನನ್ನ ಜೀವನದ ನೆಚ್ಚಿನ ಗುರುಎಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ.

ಅಶ್ವಧಿ ಎಂ .ಕೆ
ಶಿವಾಜಿನಗರ,
ಮಂಡೆಕೋಲು