ಪೆರಾಜೆ: ಆತ್ಮಹತ್ಯೆಗೆ ಶರಣಾದ ಯುವ ನರ್ಸ್, ಪತಿ ಸಾವಿಗೀಡಾದ ಹದಿನೈದು ದಿನದಲ್ಲೇ ಪತ್ನಿಯೂ ಸಾವು

0

ಯುವ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರಾಜೆಯಿಂದ ವರದಿಯಾಗಿದೆ. ಆತ್ಮಹತ್ಯೆಗೆ ಶರಣಾದ ನರ್ಸ್ ರೂಪಾ (30 ವರ್ಷ) ಎಂದು ತಿಳಿದು ಬಂದಿದೆ.

ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯವರು.ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕಕ್ಕೆ ಮದುವೆ ಮಾಡಿಕೊಡಲಾಗಿತ್ತು.ಕಳೆದ ಹದಿನೈದು ದಿನಗಳ ಹಿಂದೆ ಈಕೆಯ ಗಂಡ ಕೂಡ ತೀರಿಕೊಂಡಿದ್ದರು ಎಂದು ಹೇಳಲಾಗಿದೆ. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.