ಗುರು ನಮನ

0

ನನ್ನ ಗುರುಗಳು ನನಗೆ ಹೆಮ್ಮೆ

ಜನನಿ ಸುಳ್ಯ

ಶಿಕ್ಷಕರು ಬರೀ ಪಾಠ ಪ್ರವಚನ ಮಾಡಿದರೆ ಸಾಲದು, ಬದಲಾಗಿ ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕಿಳಿದು ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳ ಮನಸ್ಸಿನ ಅನುಸಾರ ಪಾಠ ಮಾಡಬೇಕು. ಬರೀ ನಾಲ್ಕು ಗೋಡೆಗಳ ನಡುವೆ ಮಾಡುವ ಪಾಠಕ್ಕಿಂತ ನಾಲ್ಕು ಗೋಡೆಗಳಿಗೂ ಮೀರಿದ ಜ್ಞಾನ ಕೊಡಬೇಕು. ಈ ಎಲ್ಲ ಗುಣಗಳು ನನ್ನ ಶಾಲೆಯ ಎಲ್ಲಾ ಗುರುಗಳಲ್ಲಿದೆ ಎನ್ನುವುದೇ ನನಗೆ ಹೆಮ್ಮೆ. ನನ್ನ ಎಲ್ಲಾ ಪ್ರೀತಿಯ ಗುರುವೃಂದಕ್ಕೆ ಹ್ಯಾಪಿ ಟೀಚರ್‍ಸ್ ಡೇ…….


ವಿದ್ಯಾರ್ಥಿಯಾದವರಿಗೆ ಎಲ್ಲ ಶಿಕ್ಷಕರು ಅಚ್ಚುಮೆಚ್ಚು. ಆದರೂ ಕೆಲವರು ಆಪ್ತರು. ನನಗೆ ನಮ್ಮ ಸ್ಕೂಲಿನ ಉಪ ಪ್ರಾಂಶುಪಾಲರು ಶಿಲ್ಪ ಬಿದ್ದಪ್ಪ ಮೇಡಂ ಅಂದರೆ ಅಚ್ಚುಮೆಚ್ಚು. ಸರಳ ವ್ಯಕ್ತಿತ್ವ. ಆದರೆ ವಿಚಾರಗಳು ಅತ್ಯದ್ಭುತ. ಇವರ ಶಿಸ್ತು, ನೇರ ಮಾತುಗಳು ನನಗೆ ತುಂಬಾ ಇಷ್ಟ. ಅವರನ್ನು ನಮ್ಮ ಸ್ಕೂಲಿನ ಧ್ರುವತಾರೆ ಎಂದರೂ ತಪ್ಪಾಗಲಾರದು. ಅವರು ಮಾಡುವ ಇಂಗ್ಲೀಷ್ ಪಾಠದ ಶೈಲಿಯನ್ನು ವರ್ಣನೆ ಮಾಡಲು ಪದಗಳೇ ಸಿಗಲ್ಲ. ತರಗತಿಯಲ್ಲಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ವಿದ್ಯಾರ್ಥಿಗಳಲ್ಲಿ ಧೈರ್ಯ, ಉತ್ಸಾಹ ತುಂಬುವವರು. ಎಲ್ಲರೊಂದಿಗೂ ಸ್ನೇಹದಿಂದ ಇರುವ ವ್ಯಕ್ತಿತ್ವ ಅವರದು.