ಜಾಲ್ಸೂರು: ಕದಿಕಡ್ಕದಲ್ಲಿ ವಿದ್ಯುತ್ ಕಂಬಕ್ಕೆ ಪಿಕಪ್ ಢಿಕ್ಕಿ ಜಖಂ

0

ವಿದ್ಯುತ್ ಕಂಬಕ್ಕೆ ಪಿಕಪ್ ವಾಹನ ಢಿಕ್ಕಿಯಾಗಿ ಕಂಬ ಮುರಿದು ಪಿಕಪ್ ಮೇಲೆ ಬಿದ್ದು, ಕೆಲಕಾಲ ರಸ್ತೆಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸೆ.5ರಂದು ಬೆಳಿಗ್ಗೆ ಸಂಭವಿಸಿದೆ.

ಪುತ್ತೂರಿನಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಪಿಕಪ್ ಕದಿಕಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ಮುರಿದು ಪಿಕಪ್ ವಾಹನದ ಮೇಲೆ ಬಿದ್ದ ಪರಿಣಾಮವಾಗಿ ಕೆಲಕಾಲ ದೊಡ್ಡ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು.
ಬಳಿಕ ಸ್ಥಳೀಯರ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರೆಂದು ತಿಳಿದುಬಂದಿದೆ.
ಢಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ಪಿಕಪ್ ಮೇಲೆ ಬಿದ್ದುದರಿಂದ ಪಿಕಪ್ ನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.