ಯಕ್ಷಗಾನದ ಖ್ಯಾತ ಹಾಸ್ಯಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ ಯಕ್ಷಗಾನ ಪ್ರದರ್ಶನ ನೀಡಲು ವಿದೇಶಕ್ಕೆ

0

ಯಕ್ಷಗಾನದ ಖ್ಯಾತ ಹಾಸ್ಯಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ ಇವರು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸೆ.9ರಿಂದ ಜರ್ಮನಿಯಲ್ಲಿ ನಡೆಯಲಿರುವ ಯಕ್ಷಗಾನ ಅಭಿಯಾನದಲ್ಲಿ ಭಾಗವಹಸಲಿದ್ದಾರೆ.

ಜರ್ಮನಿ ಮಾತ್ರವಲ್ಲದೇ ಬ್ರಿಟನ್, ಫ್ರಾನ್ಸ್, ಸ್ವಿರ್ಜರ್ ಲ್ಯಾಂಡ್ ದೇಶಗಳಿಗೂ ತೆರಳಲಿದ್ದಾರೆ.

ಈ ಮೊದಲು ಅಮೇರಿಕಾದಲ್ಲಿ 4 ಬಾರಿ, ಇಂಗ್ಲೆಂಡ್ ಮತ್ತಿತರ ದೇಶಗಳಲ್ಲಿ ಯೂ ಯಕ್ಷಗಾನ ದ ಛಾಪನ್ನು ಬಿತ್ತರಿಸಿದ್ದಾರೆ.

ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳಲ್ಲಿ ಅವರು ಭಾಗವಹಿಸಲಿದ್ದಾರೆ.‌

ಮಹೇಶ್ ಮಣಿಯಾಣಿಯವರು‌ ಮೂಲತಃ ನೆಲ್ಲೂರು ಕೆಮ್ರಾಜೆಯವರು.

ವಿವಿಧ ಪ್ರಸಿದ್ಧ ಮೇಳಗಳಲ್ಲಿ‌ ಗುರುತಿಸಿಕೊಂಡವರು. ಮತ್ತು ನೂರಾರು ಕಡೆಗಳಲ್ಲಿ ಅತಿಥಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.