ಸುಳ್ಯದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸುಳ್ಯ ಶಾಖೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸುಳ್ಯದ ಬಂಟರ ಭವನದಲ್ಲಿ ಸೆ.6 ರಂದು ಆಚರಿಸಲಾಯಿತು.

ಶ್ರೀಕೃಷ್ಣ ಅಷ್ಟಮಿ ದಿನದ ಕುರಿತು ರಾಜೇಶ್ ಸುಳ್ಯ ಉಪನ್ಯಾಸ ನೀಡಿದರು. ಶಾಖೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ ವೇದಿಕೆಯಲ್ಲಿ ಇದ್ದರು.









ಯೋಗ ಬಂಧುಗಳಾದ ಗಣೇಶ್, ಪದ್ಮನಾಭ ಜೈನ್, ಸುಭಾಷ್ ಡಿ.ಕೆ.,
ಕು.ವಮಿಕಾ, ಶ್ರೀಮತಿ ಸತ್ಯವತಿ, ಅನುರಾಧ ಮತ್ತು ತಂಡದವರು ಭಜನೆಗಳನ್ನು ಹಾಡಿದರು.
ಅಮೃತವಚನವನ್ನು ಶ್ರೀಮತಿ ಸೋನಾ ವಾಚಿಸಿದರು.
ಪಂಚಾಂಗ ಪಠಣ ನಾಗೇಶ್ ನೆರವೇರಿಸಿದರು. ಶ್ರೀಮತಿ ವಿನೋದ ಯೋಗ ಕ್ರಿಯೆಗಳನ್ನು ನಡೆಸಿಕೊಟ್ಟರು.
ಕು.ಮೇಘ ವಂದಿಸಿದರು.









