ಗುತ್ತಿಗಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಪಶು ವೈದ್ಯ ಡಾ. ವೆಂಕಟಾಚಲಪತಿ, ಅಂಗನವಾಡಿ ಕಾರ್ಯಕರ್ತೆ ಗುಲಾಬಿ, ಸಹಾಯಕಿ ಸೀತಮ್ಮ ಗೆ ಸನ್ಮಾನ

ಶ್ರೀ ಕೃಷ್ಣ ಭಜನಾ ಮಂದಿರ ಗುತ್ತಿಗಾರು ಹಾಗೂ ಯುವಕ ಮಂಡಲ ಗುತ್ತಿಗಾರು ಇವುಗಳ ಜಂಟಿ ಆಶ್ರಯದಲ್ಲಿ ಸೆ.6 ರಂದು ಗುತ್ತಿಗಾರಿನ ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.ಸಂಜೆ ನ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆದಿದ್ದು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರವಿಪ್ರಕಾಶ್ ಬಳ್ಳಡ್ಕ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ವೆಂಕಟಾಚಲಪತಿ, ಗುತ್ತಿಗಾರಿನ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗುಲಾಬಿ, ಅಂಗನವಾಡಿ ಸಹಾಯಕಿ ಶ್ರೀಮತಿ ಸೀತಮ್ಮ ಬಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಶಿವರಾಮ ಕಜೆಮೂಲೆ, ಗುತ್ತಿಗಾರು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚತ್ರಪ್ಪಾಡಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ, ಕಾರ್ಯದರ್ಶಿ ಪೂರ್ಣಚಂದ್ರ ಪೈಕ, ಗುತ್ತಿಗಾರು ಯುವಕ ಮಂಡಲದ ಕಾರ್ಯದರ್ಶಿ ಅಜಿತ್ ಬಾಕಿಲ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಶ್ರೀಧರ್ ಬಿ.ಕೆ ಸ್ವಾಗತಿಸಿ, ಪೂರ್ಣಚಂದ್ರ ವಂದಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಉದ್ಘಾಟನಾ ನಡೆದಿದ್ದು ನಿವೃತ್ತ ಅಬಕಾರಿ ನಿರೀಕ್ಷಕ ವೀರಪ್ಪ ಗೌಡ ಅಮೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಲೋಹಿತ್ ಚೈಪೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕ ದುಗ್ಗಪ್ಪ ಕಳ್ಳಂಪಾಡಿ, ಶ್ರೀ ಮುತ್ತಪ್ಪೇಶ್ವರ ದೈವಸ್ಥಾನ ಮೊಕ್ತೇಸರ ಚಂದ್ರಶೇಖರ ಕಂದಡ್ಕ ಉಪಸ್ಥಿತರಿದ್ದರು. ನಿತ್ಯಾನಂದ ಕಾಂತಿಲ ಸ್ವಾಗತಿಸಿ ಅಜಿತ್ ಬಾಕಿಲ ವಂದಿಸಿದರು. ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದಿದ್ದು,ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಿತು.