ಪೆರಾಜೆಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೆಂಪು ಹರಳು ( ರೂಬಿ) ಗಣಿಗಾರಿಕೆ: ಅಧಿಕಾರಿಗಳಿಂದ ಪರಿಶೀಲನೆ

0

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮತ್ತು ದ.ಕ ದ ಸುಳ್ಯ ಗಡಿಭಾಗದಲ್ಲಿ ಅಮಚೂರು ಎಂಬ ಪ್ರದೇಶದಲ್ಲಿ ಕರ್ಗಲ್ಲಿನ ಮಧ್ಯೆ ಇರುವ ಕೆಂಪು ಹರಳು ಗಣಿಗಾರಿಕೆ ಮತ್ತೆ ತಲೆ ಎತ್ತುತ್ತಿದೆ ಎಂಬ ದೂರು ಹೋಗಿ ಅಧಿಕಾತಿಗಳು ಬಂದು ಪರಿಶೀಲನೆ ನಡೆಸಿರುವ ಘಟನೆ ವರದಿಯಾಗಿದೆ.

ಪೆರಾಜೆ ಗ್ರಾಮದ ಅಮಚೂರು ಎಂಬಲ್ಲಿ ನಡೆಯುತ್ತಿರುವ ಕರ್ಗಲ್ಲು ಗಣಿಗಾರಿಕೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸೆ.2 ರಂದು ದಿಢೀರ್ ಧಾಳಿ ನಡೆಸಿದ್ದಾರೆ. ಈಗಿನ ಶಾಸಕರಾದ ಪೊನ್ನಣ್ಣ ಎ.ಎಸ್ ಅವರಿಗೆ ಕರ್ಗಲ್ಲಿನ ಗಣಿಗಾರಿಕೆ ಸ್ಫೋಟ ಕ ಬಳಿಸಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಹೋದ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸದಂತೆ ಆದೇಶ ಮಾಡಲು ಸೂಚಿಸಿದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಎಚ್ಚೆತ್ತು ಇದೀಗ ದಿಢೀರ್ ಧಾಳಿ ನಡೆಸಿದ್ದಾರೆಂದು ಹೇಳಲಾಗಿದೆ.

ಎರಡು ವರ್ಷಗಳ ಹಿಂದೆ ಪೆರಾಜೆಯ ವಜ್ರಪುರದಲ್ಲಿ ಅಕ್ರಮ ಕೆಂಪುಹರಳು ಗಣಿಗಾರಿಕೆ ನಡೆಯುತ್ತಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಸಾಕಷ್ಟು ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದೆ. ಅದೇ ವೇಳೆ ಅಮಚೂರಿನಲ್ಲಿ ಕೆಂಪುಹರಳು ಗಣಿಗಾರಿಕೆ ನಡೆಯುತ್ತಿತ್ತು ಎಂದು ಸ್ಥಳೀಯ ವಾಗಿ ಕೇಳಿಬರುತ್ತಿತ್ತು. ಆದರೆ ವಜ್ರಪುರದಲ್ಲಿ ಗಣಿಗಾರಿಕೆ ಸ್ಥಗಿತ ಬಳಿಕ ಅಮಚೂರುನಲ್ಲಿ ಸಕ್ರಿಯವಾಗಿ ಅಕ್ರಮ ಕೆಂಪು ಹರಳು ಗಣಿಗಾರಿಕೆ ತಲೆಎತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕಂದಾಯ ಇಲಾಖೆ ಅಮೆಚೂರು ಖಾಸಾಗಿ ಜಾಗದಲ್ಲಿ ನಡೆಯುತ್ತಿದ್ದ ಕರ್ಗಲ್ಲಿನ ಗಣಿಗಾರಿಕೆ ಧಾಳಿ ನಡೆಸಿದಾಗ, ಆ ಜಾಗದ ಮಾಲಿಕರು ಇದು ನೀರಿಗಾಗಿ ಕೆರೆ ತೆಗೆಯಲು ಕರ್ಗಲ್ಲನ್ನು ಒಡೆದು ತೆಗೆಯಲಾಗಿದೆ ಎಂಬ ಹೇಳಿಕೆಯನ್ನು ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲಿನ ಸ್ಥಳವನ್ನು ಗಮನಿಸಿದಾಗ ಕರ್ಗಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಎದ್ದು ಕಾಣುತ್ತಿದೆ. ಕೆರೆ ತೆಗೆಯಲು ಕರ್ಗಲ್ಲನ್ನು ಕೊರೆಯಲಾಗಿದೆ ಎಂಬ ಹೇಳಿಕೆ ಶಂಕಾಸ್ಪದವಾಗಿದೆ. ಕೆರೆಯ ರೀತಿಯಲ್ಲಿ ಯೇ ಕೊರೆದು ಕೆಂಪುಹರಳು ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಸ್ಥಳೀಯರು ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕರ್ಗಲ್ಲಿನ ಗಣಿಗಾರಿಕೆಯೇ ಅಥವಾ ಕೆಂಪು ಹರಳು ಗಣಿಗಾರಿಕೆಯೇ ಎಂಬ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸ್ಪಷ್ಟ ಪಡಿಸಬೇಕಾಗಿದೆ.

ಕಂದಾಯ ಇಲಾಖೆ ದಿಢೀರ್ ಧಾಳಿ- ಕೆಂಪು ಹರಳು ಗಣಿ ಗಾರಿಕೆಯನ್ನು ಮುಚ್ಚಿಹಾಕುವ ಪ್ರಯತ್ನ ಗ್ರಾಮಸ್ಥರಿಂದ ಆರೋಪ : ಮಡಿಕೇರಿ ಕಂದಾಯ ಇಲಾಖೆಯ ಕಂದಾಯ ವೀಕ್ಷಕರು ದಿಢೀರ್ ಧಾಳಿ , ಕೆಂಪು ಹರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸರಿಯಾದ ಮಾಹಿತಿ ಇದ್ದು , ಅಲ್ಲದೆ ಇಲಾಖೆಯವರು ಶಾಮೀಲು ಆಗಿರುವುದರಿಂದಲೇ ನಡೆಸಲಾಗಿದೆ. ಈ ವಿಚಾರ ಪ್ರಚಾರಗೊಂಡು ಶಾಸಕರಾದ ಪೊನ್ನಣ್ಣ ಅವರಿಗೆ ತಿಳಿದರೆ ಅಥವಾ ಸ್ಥಳೀಯ ದೂರುಗಳು ಹೋದರೆ ಕಂದಾಯ ಇಲಾಖಾ ಅಧಿಕಾರಿಗಳ ಹುದ್ದೆಗೆ ಕುತ್ತು ಬರಬಹುದೆಂಬ ಉದ್ದೇಶದಿಂದ ಈ ರೀತಿಯಲ್ಲಿ ಧಾಳಿಯಾಗಿದೆ ಎಂದು ಹೇಳಲಾಗುತ್ತಿದೆ. ಮುಂದೆ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

ಕರ್ಗಲ್ಲಿನ ಗಣಿಗಾರಿಕೆ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಧಾಳಿ ನಡೆಸಲಾಗಿದೆ. ಈ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಹಿಸಲಾಗಿದೆ.
ವೆಕಟೇಶ್, ಕಂದಾಯ ನಿರೀಕ್ಷಕರು, ಸಂಪಾಜೆ