ಸುಳ್ಯ ರೈತ ಉತ್ಪಾದಕ ಕಂಪೆನಿ ವಾರ್ಷಿಕ ಮಹಾಸಭೆ

0

3 ವರ್ಷದ ಲಾಭಾಂಶವನ್ನು ರಿಸರ್ವ್ ಫಂಡ್ ಆಗಿ ಇಡಲು ನಿರ್ಧಾರ : ಸಭೆ ಒಪ್ಪಿಗೆ

ಸುಳ್ಯ ಸಿ.ಎ.ಬ್ಯಾಂಕ್, ಮಡಪ್ಪಾಡಿ ಸಹಕಾರ ಸಂಘಕ್ಕೆ `ಗ್ರಾಹಕ ಪ್ರಶಸ್ತಿ’ ಪ್ರದಾನ

ಸುಳ್ಯ ರೈತ ಉತ್ಪಾದಕ ಕಂಪೆನಿಯು ಮೂರು ವರ್ಷ ಗಳಿಸುವ ಲಾಭಾಂಶವನ್ನು ರಿಸರ್ವ್ ಫಂಡ್ ಆಗಿ ಸಂಸ್ಥೆಯಲ್ಲೇ ಉಳಿಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದ್ದು ಇದಕ್ಕೆ ಮಹಾಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.


ಸುಳ್ಯ ರೈತ ಉತ್ಪಾದಕ ಕಂಪೆನಿಯ ವಾರ್ಷಿಕ ಮಹಾಸಭೆಯು ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್‌ರ ಅಧ್ಯಕ್ಷತೆಯಲ್ಲಿ ಸೆ.೮ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಸಂಸ್ಥೆಯು ಆರಂಭಗೊಂಡು ಇದು ಎರಡನೇ ಮಹಾಸಭೆ. ಸದಸ್ಯರ ಸಲಹೆಯನ್ನು ಪಡೆದು ನಾವು ಕಾರ್ಯ ನಿರ್ವಹಿಸುತ್ತಿzವೆ. ಕಳೆದ ವರ್ಷ ೪ ಸಾವಿರ ಲಾಭಗಳಿಸಿದ್ದು ಈ ಸಂಸ್ಥೆ, ಎರಡನೇ ವರ್ಷದಲ್ಲಿ ೪ ಲಕ್ಷದ ೮೨ ಸಾವಿರ ಲಾಭಗಳಿಸಿದೆ. ಈ ಲಾಭದಲ್ಲಿ ನಮಗೆ ಸಿಗುತ್ತದೆಯೋ ಎಂದು ಸದಸ್ಯರು ಕೇಳುತ್ತಿದ್ದಾರೆ.

ಆದರೆ ಆರಂಭದ ಮೂರು ವರ್ಷಗಳಲ್ಲಿ ಸಂಸ್ಥೆ ಗಳಿಸಿವ ಲಾಭವನ್ನು ರಿಸರ್ವ್ ಫಂಡ್ ಆಗಿ ಇಡಲು ನಾವು ನಿರ್ಧರಿಸಿzವೆ. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಬೇಕು ಎಂದು ವೀರಪ್ಪ ಗೌಡರು ಸಂಸ್ಥೆಯ ಬೆಳವಣಿಗೆಯ ಕುರಿತು ವಿವರ ನೀಡಿದರು. ಆಗ ಸಭೆಯಲ್ಲಿದ್ದ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅಧ್ಯಕ್ಷರ ಮಾತಿಗೆ ಸಮ್ಮತಿ ಸೂಚಿಸಿದರು.


ಗ್ರಾಹಕ ಪ್ರಶಸ್ತಿ ಪ್ರದಾನ : ವರದಿ ಸಾಲಿನಲ್ಲಿ ಸಂಸ್ಥೆಯೊಂದಿಗೆ ಉತ್ತಮ ವ್ಯವಹಾರ ನಡೆಸಿದರೆಂಬ ಕಾರಣಕ್ಕೆ ಸುಳ್ಯ ಸಿ.ಎ. ಬ್ಯಾಂಕ್ ಹಾಗೂ ಮಡಪ್ಪಾಡಿ ಸಹಕಾರಿ ಸಂಘಕ್ಕೆ ಉತ್ತಮ ಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಪ್ರಶಸ್ತಿ ಸ್ವೀಕರಿಸಿದರೆ, ಮಡಪ್ಪಾಡಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೆ ವೈಯಕ್ತಿಕವಾಗಿ ಸಂಸ್ಥೆಯಲ್ಲಿ ಉತ್ತಮ ವ್ಯವಹಾರ ನಡೆಸಿದವರೆಂದು ಸುಬ್ರಹ್ಮಣ್ಯ ಭಟ್ ಕಾವಿನಮೂಲೆ, ಈಶ್ವರ ಭಟ್ ಕಾವಿನಮೂಲೆ ಹಾಗೂ ದೇವರಾಜ್ ಆಳ್ವರನ್ನು ಗೌರವಿಸಲಾಯಿತು. ಕೃಷ್ಣಕುಮಾರ್ ಕಲ್ಚಾರ್ ಕೂಡಾ ಸನ್ಮಾನಕ್ಕೆ ಭಾಜನರಾಗಿದ್ದು ಅವರು ಸಭೆಗೆ ಆ ವೇಳೆಗೆ ಬಂದಿರಲಿಲ್ಲ.


ಹಳದಿ ಎಲೆ ರೋಗ
ವರದಿ ಪಡೆಯಲು ಸದಸ್ಯರ ಸಲಹೆ
ಸಭೆಯಲ್ಲಿ ಸದಸ್ಯರ ಸಲಹೆಗೆ ಅವಕಾಶ ನೀಡಿದಾಗ ಮಾತನಾಡಿದ ನ್ಯಾಯವಾದಿ ಸುಕುಮಾರ್ ಕೋಡ್ತಗುಳಿಯವರು, ಅಡಿಕೆ ಎಲೆ ಹಳದಿ ರೋಗದಿಂದ ತಾಲೂಕಿನ ಅಡಿಕೆ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ವಿಟ್ಲ ಸಿಪಿಸಿಆರ್‌ಐ ಸಂಸ್ಥೆಯವರು ಸಂಶೋಧನೆ ನಡೆಸಿದ್ದಾರೆ. ಆದರೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಈ ಸಂಸ್ಥೆ ಅಲ್ಲಿಂದ ವರದಿಯನ್ನು ಪಡೆದು ಸದಸ್ಯರಿಗೆ ನೀಡಬೇಕು ಎಂದು ಸಲಹೆ ನೀಡಿದರು. ಸಂಪಾಜೆಯ ಕೃಷಿಕ ಕೆ.ಪಿ. ಜಗದೀಶರುರೈತ ಉತ್ಪಾದಕ ಕಂಪೆನಿಯ ಮೂಲಕ ಕೈಷಿಕ ಬೆಳೆಯುವ ಎಲ್ಲ ಬೆಳೆ ಖರೀದಿ ಮಾಡಿದರೆ ಒಲಿತು ಎಂದು ಹೇಳಿದರು. ಸುಳ್ಯ ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲರು “ಸುಳ್ಯದ ಸಂಸ್ಥೆ ತುಂಬಾ ಆಕ್ಟಿವ್ ಇದೆ. ರೈತರು ಬೆಳೆಯುವ ಸಾವಯವ ಬೆಳೆಗೆ ಮಾರುಕಟ್ಟೆಯನ್ನು ಒದಗಿಸುವ ಕೆಲಸ ಈ ಭಾಗದಲ್ಲಿ ಆಗಬೇಕು. ವ್ಯವಹಾರ ರೈತರೇ ಮಾಡುವುದು. ಅವರನ್ನು ಸೇರಿಸುವ ಕೆಲಸ ಸಂಸ್ಥೆ ಮಾಡಿದರೆ ಉಪಯೋಗ ಆಗಬಹುದು ಎಂದು ಹೇಳಿದರು. ಹಿರಿಯರಾದ ಬಾಪೂ ಸಾಹೇಬ್, ಗೋಪಾಲಕೃಷ್ಣ ಕುತ್ಯಾಳ, ಶಶಿಧರ ಪಡ್ಪು, ಮಂಜುನಾಥ ಮಡ್ತಿಲ, ಶರತ್ ಅಡ್ಕಾರ್, ಜಯಪ್ರಕಾಶ್ ನೆಕ್ರೆಪ್ಪಾಡಿ ಮೊದಲಾದವರು ಸಲಹೆ ನೀಡಿದರು.
ಅಟಲ್ ಇನ್ಕ್ಯೂಬೇಷನ್ ಸೆಂಟರ್ ಸಂಯೋಜಕಿ ದೀಕಾ, ತೋಟಗಾರಿಕಾ ಇಲಾಖೆಯ ಅಧಿಕಾರಿ ವಿಜೇತ್, ರೈತ ಉತ್ಪಾದಕ ಕಂಪೆನಿಯ ನಿರ್ದೇಶಕರುಗಳಾದ ಜಯರಾಮ ಮುಂಡೋಳಿಮೂಲೆ, ಮಧುರಾ ಎಂ.ಆರ್. ಮಂಡೆಕೋಲು, ನೇತ್ರಕುಮಾರ ಕನಕಮಜಲು, ನೂಜಾಲು ಪದ್ಮನಾಭ ಗೌಡ, ಶ್ರೀಶಕುಮಾರ್ ಮಾಯಿಪಡ್ಕ ಅಮರಮುಡ್ನೂರು, ಸತ್ಯಪ್ರಸಾದ್ ಅಮರಪಡ್ನೂರು, ಸುರೇಶ್ ರೈ ಬಾಳಿಲ, ದೇವರಾಜ್ ಆಳ್ವ ಪೆರುವಾಜೆ, ರಾಮಕೃಷ್ಣ ಬೆಳ್ಳಾರೆ, ಲೋಹಿತ್ ಕೊಡಿಯಾಲ, ಅಮೃತ್ ರೈ ಮರ್ಕಂಜ, ಸಂತೋಷ್ ಕುಮಾರ್ ನಡುಮುಟ್ಲು, ಭಾಸ್ಕರ್ ನಾಯರ್ ಅರಂಬೂರು, ಗೌರವ ಸಲಹೆಗಾರರಾದ ಡಾ| ರಂಗಯ್ಯ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕೆ ವರದಿ ವಾಚಿಸಿದರು.