ಪ್ರವಾದಿ ಮಹಮ್ಮದ್ (ಸ.ಅ)ರವರ ಜನ್ಮ ತಿಂಗಳಾಗಮನ ಪ್ರಯುಕ್ತ ಮೀಲಾದ್ ಘೋಷಣಾ ಜಾಥಾ

0

ಸುಳ್ಯ ತಾಲೂಕಿನ ಪ್ರತಿಷ್ಠಿತ ಸಮನ್ವಯ ವಿದ್ಯಾಸಂಸ್ಥೆ ಅನ್ಸಾರಿಯಾ ಎಜುಕೇಷನ್ ಸೆಂಟರ್ ವತಿಯಿಂದ ಮೀಲಾದ್ ಘೋಷಣಾ ಜಾಥಾ ಹಮ್ಮಿಕೊಳ್ಳಲಾಯಿತು. ಅನ್ಸಾರಿಯಾ ಸಂಸ್ಥೆಯಿಂದ ಪ್ರಾರಂಭಗೊಂಡ ಜಾಥಾ ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗಿ ಗಾಂಧಿನಗರದಲ್ಲಿ ಕೊನೆಗೊಂಡಿತು. ಸಯ್ಯಿದ್ ತ್ವಾಹಿರ್ ಸ‌ಅದಿ ತಂಙಳ್‌ರವರ ಪ್ರಾರ್ಥನೆಯೊಂದಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಸಂದೇಶ ಭಾಷಣವನ್ನು ಸಂಸ್ಥೆಯ ಡಿಗ್ರಿ ವಿದ್ಯಾರ್ಥಿ ಇಲ್ಯಾಸ್ ಪೈಚಾರ್ ನಿರ್ವಹಿಸಿ ಇಸ್ಲಾಂ ಧರ್ಮ ಶಾಂತಿ, ಸಹಬಾಳ್ವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಮನುಷ್ಯರಾದ ನಾವು ಮಾನವೀಯತೆ ಉಳ್ಳವರಾಗೋಣ. ಮಾನವೀಯತೆ ಪ್ರವಾದಿಯವರ ಜೀವನ ಸಂದೇಶವಾಗಿತ್ತು ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಪಟೇಲ್, ಎಸ್.ಪಿ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ನಿರ್ದೇಶಕರಾದ ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಕೊಕ್ಕೊ,ಶರೀಫ್ ಕಂಠಿ,ಕಮಾಲ್ ಅಜ್ಜಾವರ, ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್,ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ,ಹಮೀದ್,ಉಮ್ಮರ್ ಕೊಲ್ಚಾರ್, ಕೆಬಿ ಇಬ್ರಾಹಿಂ, ಇಕ್ಬಾಲ್ ಎಲಿಮಲೆ,ಮುಸ್ತಾಫ ಬೀಜಕೊಚ್ಚಿ,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್
ರವರು ಭಾಗವಹಿಸಿದರು.
ಅನ್ಸಾರಿಯ ಅಧ್ಯಾಪಕ ವೃಂದ ನೇತೃತ್ವದಲ್ಲಿ ಕಾರ್ಯಕ್ರಮ
ನಡೆಯಿತು.
ಅನ್ಸಾರಿಯಾ ವಿದ್ಯಾರ್ಥಿಗಳ ದಫ್, ಸ್ಕೌಟ್ ಒಳಗೊಂಡ ಜಾಥಾ ನೋಡುಗರ ಕಣ್ಮನ ಸೆಳೆಯಿತು.

LEAVE A REPLY

Please enter your comment!
Please enter your name here