ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

0

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ಸೆ. 16 ರಂದು ನಡೆಯಿತು. ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ ದಿಕ್ಸುಚಿ ಭಾಷಣ ಮಾಡಿದರು. ಪೋಷಕರಿಗೆ ಕೆರಿಯರ್ ಗೈಡೆನ್ಸ್ ಮತ್ತು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರ ಪಾತ್ರ, ಉನ್ನತ ವಿದ್ಯಾಭ್ಯಾಸದ ಕುರಿತಂತೆ ಸಂಪೂರ್ಣ ವಿವರಣೆಗಳನ್ನು ಪೋಷಕರಿಗೆ ನೀಡುವ ಮೂಲಕ ಶುಭಹಾರೈಸಿದರು.

ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಮಾತನಾಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಾಲೇಜಿನ ಶಿಸ್ತು ಪಾಲನೆಯಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು. ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್ ಕಾಲೇಜಿನ ನಿಯಮಗಳನ್ನು ಪೋಷಕರಿಗೆ ವಿವರಿಸಿದರು. ಶ್ರೀಮತಿ ಮಲ್ಲಿಕಾ ಹಾಗೂ ಶ್ರೀಮತಿ ಭವ್ಯ ಪ್ರಥಮ ಹಾಗೂ ದ್ವಿತೀಯ ಪಿ.ಯು ಪೋಷಕರಿಗೆ ಕಾಲೇಜಿನ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ವಿವರಿಸಿದರು. ಶ್ರೀಮತಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರತ್ನಾವತಿ ಮತ್ತು ಶ್ರೀಮತಿ ಅರ್ಪಿತಾ ಸ್ವಾಗತಿಸಿದರು. ಶ್ರೀಮತಿ ಅಭಿಜ್ಞಾ ವಂದಿಸಿದರು

LEAVE A REPLY

Please enter your comment!
Please enter your name here