ಪೆರಾಜೆ ಹಾಸ್ಟೆಲ್ ನಿಂದ ಹೋದ ಮೂವರು‌ ಮಕ್ಕಳು ಬೆಂಗಳೂರಲ್ಲಿ ಪತ್ತೆ

0

ಪೆರಾಜೆ ಹಾಸ್ಟೆಲ್ ನಲ್ಲಿದ್ದು ವಿದ್ಯಾಭ್ಯಾಸ ಪಡೆಯುತ್ತಿದ್ದ ಮೂವರು ಮಕ್ಕಳು ನಿನ್ನೆಯಿಂದ ನಾಪತ್ತೆಯಾಗಿದ್ದು ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಮಕ್ಕಳು ನಾಪತ್ತೆಯಾಗಿರುವ ಕುರಿತು‌ನಿನ್ನೆ ಪೋಲೀಸರಿಗೆ ಮಾಹಿತಿ ನೀಡಲಾಗಿತ್ತರಂದು‌ ಹೇಳಲಾಗಿದ್ದು ಇದೀಗ ಆ ಮೂವರು ಮಕ್ಕಳು ಬೆಂಗಳೂರಿನಲ್ಲಿ ಇರುವ ಮಾಹಿತಿ ಲಭಿಸಿರುವುದಾಗಿ ಹೇಳಲಾಗಿದೆ. ಬೆಂಗಳೂರು ಪೋಲೀಸರು ಪೆರಾಜೆಗೆ ಕರೆ ಮಾಡಿದ್ದು‌ಮಕ್ಕಳ ಪೋಷಕರು ಮಕ್ಕಳನ್ನು ಕರೆದುಕೊಂಡು‌ ಬರಲು ಹೋಗಿದ್ದಾರೆಂದು ತಿಳಿದುಬಂದಿದೆ.

ಮಕ್ಕಳು ಯಾಕೆ ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

LEAVE A REPLY

Please enter your comment!
Please enter your name here