ಸುಳ್ಯ ಲ್ಯಾಂಪ್ ಸೊಸೈಟಿ ಮಹಾಸಭೆ

0

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ, ಲ್ಯಾಂಪ್ಸ್ ಇದರ ವಾರ್ಷಿಕ ಮಹಾಸಭೆ ಸೆ. 17ರಂದು ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕರ ಅಧ್ಯಕ್ಷತೆಯಲ್ಲಿ ಸುಳ್ಯ ಅಂಬಟೆಡ್ಕದಲ್ಲಿರುವ ಗಿರಿದರ್ಶಿನಿ ಸಭಾ ಭವನದಲ್ಲಿ ನಡೆಯಿತು.

ಉಪಾಧ್ಯಕ್ಷ ಬಿ. ಕುಂಞಣ್ಣ ನಾಯ್ಕ ಕಳಂಜ,
ಶ್ರೀಮತಿ ರೇವತಿ ಪಿ. ಅಜ್ಜಾವರ, ಎಂ. ವಿಠಲ ನಾಯ್ಕ ಎಡಮಂಗಲ, ಬಿ. ಸುಬ್ಬಣ್ಣ ನಾಯ್ಕ, ಗುತ್ತಿಗಾರು, ಮಾಧವ ಡಿ. ಸುಬ್ರಹ್ಮಣ್ಯ, ಶ್ರೀಮತಿ ನೀಲಮ್ಮ ಕೆ. ಅಮರ ಪಡೂರು
ಶ್ರೀಮತಿ ಕುಸುಮ ಸಿ. ನೆಲ್ಲೂರು ಕೆಮ್ರಾಜೆ, ಶ್ರೀಮತಿ ವಿಮಲಾಕ್ಷಿ ಟಿ. ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಡಿ ಸ್ವಾಗತಿಸಿ ವರದಿ ವಾಚಿಸಿದರು. ನಿರ್ದೇಶಕಿ ಶ್ರೀಮತಿ ರೇವತಿ ಪ್ರಾರ್ಥಸಿದರು. ರಘುನಾಥ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.