ಸೆ.24 : ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಹಾಸಭೆ

0

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆಯು ಸೆ.24 ರಂದು ಸುಳ್ಯದ ಶ್ರೀರಾಮಪೇಟೆಯಲ್ಲಿರುವ ದೇವಮ್ಮ ಕಾನತ್ತಿಲ ಕಾಂಪ್ಲೆಕ್ಸ್ ಮಹಡಿಯಲ್ಲಿ ಯಂ.ಹರಿಶ್ಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು.
ಬೆಳಿಗ್ಗೆ ಗಂಟೆ 9.30 ರಿಂದ ಸಂಘದ ಪದಾಧಿಕಾರಿಗಳಿಗೆ ಮತ್ತು ಅವರ ಮಕ್ಕಳಿಗೆ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿದೆ.ಸಂಘದ ಸದಸ್ಯರ ಮಕ್ಕಳು 7ನೇ, 10 ನೇ, ಪಿಯುಸಿ ಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಯಂ.ಹರೀಶ್ಚಂದ್ರರವರು ತಿಳಿಸಿದ್ದಾರೆ.