ನಮ್ಮದು ಕಾಂಗ್ರೆಸ್ ರೆಬೆಲ್ ಮೀಟಿಂಗ್ ಅಲ್ಲವೇ ಅಲ್ಲ ; ಕಾರ್ಯಕರ್ತರ ನೋವು ಹಂಚಿಕೊಂಡಿದ್ದಾರೆ – ಎಂ.ವೆಂಕಪ್ಪ ಗೌಡ

0

ಸೆ.26ರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಎಲ್ಲರೂ ಭಾಗವಹಿಸೋಣ : ಕಾರ್ಯಕರ್ತರಿಗೆ ಸಲಹೆ ; ಬಿಜೆಪಿ ವಿರುದ್ಧ ವಾಗ್ದಾಳಿ

ತನ್ನ ಉಚ್ಛಾಟನೆಯನ್ನು ನೆನೆದು ಕಣ್ಣೀರಾದ ಎಂ.ವಿ.ಜಿ

ಸುಳ್ಯದಲ್ಲಿ ಆಯೋಜಿಸಿರುವ ಈ ಸಭೆ ಕಾಂಗ್ರೆಸ್ ರೆಬೆಲ್ ಮೀಟಿಂಗ್ ಅಲ್ಲವೇ ಅಲ್ಲ. ವೇದಿಕೆಯಲ್ಲಿ ಕಾರ್ಯಕರ್ತರಿಗೆ ಅಭಿಪ್ರಾಯ ಹಂಚಿಕೆಗೆ ಅವಕಾಶ ಕಲ್ಪಿಸಿದ್ದಾರಷ್ಟೇ. ಸೆ.೨೬ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಳ್ಯದಲ್ಲಿ ಕರೆದ ಸಭೆಗೂ ನಾವೆಲ್ಲ ಕಾರ್ಯಕರ್ತರು ಹೋಗೋಣ. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ನಮ್ಮ ಸಲಹೆ ಕೊಡೋಣ ಎಂದು ಎಂ.ವೆಂಕಪ್ಪ ಗೌಡರು ಕಾರ್ಯಕರ್ತರಿಗೆ ಹೇಳಿದರು.
ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸೆ.೧೮ರಂದು ಸಂಜೆ ಕಾಂಗ್ರೆಸ್ ಉಚ್ಛಾಟಿತ ನಾಯಕರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.


“ಕಾಂಗ್ರೆಸ್ ಸರಕಾರದಲ್ಲೇ ಅಕ್ರಮ – ಸಕ್ರಮ ಸಮಿತಿಗೆ ಬಿಜೆಪಿಯವರ ನೇಮಕವಾಗಿದೆ. ಇದನ್ನು ೧೦ ರಿಂದ ೧೫ ದಿನಗಳೊಳಗೆ ಸರಿಪಡಿಸಬೇಕು ಎನ್ನುವುದು ನಮ್ಮ ಬೇಡಿಕೆ. ಇದನ್ನು ಈಗಲೇ ಸರಿಪಡಿಸದಿದ್ದರೆ ಮುಂದೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿಯಿಂದ ಹಿಡಿದು ಎಲ್ಲ ದೇವಸ್ಥಾನಗಳಳ ಟ್ರಸ್ಟಿಯೂ ಬಿಜೆಪಿಯವರ ಪಾಲಾಗಬಹುದು. ಇದೇ ಹೆದರಿಕೆಯಿಂದ ಇಲ್ಲಿ ಸಭೆ ಆಯೋಜಿಸಿದ್ದಾರೆ. ಇಲ್ಲಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರದ ಮೇಲೆ ಆಸೆ ಇಟ್ಟವರಲ್ಲ. ಆದರೆ ಕಾಂಗ್ರೆಸ್ ಸರಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕೆನ್ನುವುದು ನಮ್ಮ ಕಾಳಜಿ. ಯಾವೊಂದು ಸ್ಥಾನವೂ ಬಿಜೆಪಿಗರಿಗೆ ನೀಡಬಾರದು. ಇದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಶಾಸಕರು ಕೊಟ್ಟರಂತೆ ಅವರು ಕಳುಹಿಸಿದರು.

ಅದು ಆಗಬಾರದು. ಈಗ ನೇಮಕವಾದ ಅಕ್ರಮ ಸಕ್ರಮ ಸಮಿತಿಯ ಸಿಟ್ಟಿಂಗ್ ನಡೆದರೆ ಆ ಸಭೆ ನಡೆಯುವ ಜಾಗದ ಎದುರೇ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ವೆಂಕಪ್ಪ ಗೌಡರು ಎಚ್ಚರಿಕೆ ನೀಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ : ಸುಳ್ಯದ ೧೧೦ ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಕಾಮಗಾರಿ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ನಡೆಸುವುದಾಗಿ ಪತ್ರಿಕೆಯಲ್ಲಿ ಹೇಳಿಕೆ ಕೊಡುತ್ತಾರೆ. ಜನವರಿ ೧೦ ರಂದು ಸುಳ್ಯದಲ್ಲಿ ೧೧೦ ಕೆವಿ ಸಬ್‌ಸ್ಟೇಶನ್ ಗುದ್ದಲಿಪೂಜೆ ಆಗಿದೆ. ಜನವರಿಯಿಂದ ಎಪ್ರಿಲ್ ತನಕ ಬಿಜೆಪಿ ಸರಕಾರ ಏನು ಮಾಡುತ್ತಿತ್ತು. ಇಲ್ಲಿಯ ಜನಪ್ರತಿನಿಧಿಗಳು ಯಾಕೆ ಅನುದಾನ ತರಿಸಿ ಕೆಲಸ ಆರಂಭಿಸಿಲ್ಲ. ೧೧೦ ಕೆ.ವಿ. ಸಬ್ ಸ್ಟೇಷನ್ ಕಾಮಗಾರಿ ತಡೆಗೆ ಇಲ್ಲಿಯ ಶಾಸಕರಾಗಿದ್ದ ಅಂಗಾರರು ಪತ್ರಬರೆದಾಗ ಇಲ್ಲಿ ಬಿಜೆಪಿಗರು ಯಾಕೆ ಪ್ರತಿಭಟನೆ ಮಾಡಿಲ್ಲ. ಆ ಕಾಪಿ ಈಗಲೂ ನನ್ನೊಡನಿದೆ. ನಾನು ಸಭೆ ಕರೆದಾಗ ನನ್ನ ವಿರುದ್ಧವೇ ಹಕ್ಕುಚ್ಯುತಿ ಮಂಡನೆ ಮಾಡ್ತಾರೆ ಎಂದು ಹೇಳಿದ ಅವರು, ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಬಿಜೆಪಿ ನೆಟ್ ವರ್ಕ್ ಕುರಿತು ಪ್ರಸ್ತಾಪಿಸಿದರು.
ಕಣ್ಣೀರಾದ ಎಂ.ವಿ.ಜಿ. : ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಪರವಾಗಿ ನಾನು ಕೆಲಸ ಮಾಡಿzನೆ. ಸಂಪಾಜೆ ಹೊರತು ಪಡಿಸಿ ಕ್ಷೇತ್ರವೆಲ್ಲ ಸುತ್ತಿzನೆ. ಆದರೂ ನನ್ನ ವಿರುದ್ಧ ಯಾಕೆ ಉಚ್ಚಾಟನಾ ಕ್ರಮ ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರಲ್ಲದೆ, ಪಂಜದಲ್ಲಿ, ಕೊಲ್ಲಮೊಗ್ರದಲ್ಲಿ ಬಜರಂಗದಳದ ಕಾರ್ಯಕರ್ತರು ವಿರುದ್ಧ ಬಂದಾಗ ಅವರಿಗೆ ದೂರು ನಿಂತು ಮಾತನಾಡಿರುವುದು ನಾನು ಹೀಗಿದ್ದೂ ನನ್ನ ವಿರುದ್ಧ ಯಾಕೆ ಈ ಕ್ರಮವಾಯಿತು ಎಂದು ಮತ್ತೆ ಮತ್ತೆ ಪ್ರಶ್ನಿಸಿದರು. ಒಂದು ವೇಳೆ ಸುಮ್ಮನಾದ ವೆಂಕಪ್ಪ ಗೌಡರು ಕಣ್ಣೀರು ಸುರಿಸಿದರು. ನಾನು ಡಿ.ಕೆ. ಶಿವಕುಮಾರ್‌ರಿಗೆ ನನ್ನ ಕೆಲಸದ ವಿವರ ನೀಡಿzನೆ. ಅವರು ಶಿಸ್ತು ಸಮಿತಿ ಅಧ್ಯಕ್ಷರಿಗೆ ಬರೆದು ಸುಳ್ಯದ ಕಾಂಗ್ರೆಸ್ಸಿಗರು ಪಕ್ಷದ ಜತೆ ನಿಲ್ಲುವವರು. ಅವರನ್ನು ರಕ್ಷಿಸಬೇಕು. ಅವರ ಜತೆ ನಾವು ನಿಲ್ಲಬೇಕು ಎಂದು ಪತ್ರ ಬರೆದಿದ್ದಾರೆ. ಆದ್ದರಿಂದ ನಮ್ಮ ಉಚ್ಛಾಟನೆ ವಾಪಸ್ ಪಡೆದಂತಾಗಿದೆ. ನಾವೆಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಹೇಳಿ, ಸುಳ್ಯಕ್ಕೆ ಎಐಸಿಸಿ ಅಧ್ಯಕ್ಷರು ಬಂದಾಗ ಮಧ್ಯಾಹ್ನ ಕಾರ್ಯಕರ್ತರಿಗೆ ಊಟ ಕೊಡಬೇಕೆಂದು ನಿರ್ಧಾರವಾಗಿತ್ತು. ಆಗ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಬಳಿಕ ನಾನು ಹೋಗಿ ಮಾತನಾಡಿ ಅನುಮತಿ ಸಿಗುಂತೆ ಮಾಡಿzನೆ. ಇಷ್ಟೆಲ್ಲ ಪಕ್ಷಕ್ಕೆ ದುಡಿದ ನನ್ನ ಮೇಲೆ ಯಾಕೆ ಉಚ್ಛಾಟನೆ ಕ್ರಮ ಎಂದು ಸಭೆ ಉದ್ದಕ್ಕೂ ಪ್ರಶ್ನೆ ಇಟ್ಟರು.
ಕೆ.ಗೋಕುಲ್ ದಾಸ್ ಮಾತನಾಡಿ ೨೬ರಂದು ಬ್ಲಾಕ್ ಅಧ್ಯಕ್ಷರು ಕರೆದ ಸಭೆಗೆ ನಾನು ಹೋಗಲು ಇಚ್ಚೆಪಡುತ್ತೇನೆ. ಕಾರ್ಯಕರ್ತರಿಗೆ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ನೀಡಬೇಕು. ನಾಯಕರು ನಮ್ಮ ಅಹವಾಲು ಆಲಿಸಬೇಕು. ಸುಳ್ಯದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ನಾವೆಲ್ಲರೂ ತೆಗೆದುಕೊಳ್ಳೋಣ ಎಂದು ಅವರು ಹೇಳಿದರು.
ಚಂದ್ರೇಖರ ಕೋನಡ್ಕ, ಸತ್ಯಕುಮಾರ್ ಆಡಿಂಜ, ಚೇತನ್ ಕಜೆಗದ್ದೆ, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ.ಜೆ. ಮೊದಲಾದವರು ಅಭಿಪ್ರಾಯ ವ್ಯಕ್ತ ಪಡಿಸಿದರು.

LEAVE A REPLY

Please enter your comment!
Please enter your name here