ಯುವಜನ ಕ್ರೀಡಾ ಇಲಾಖೆ – ಯುವಜನ ಸಂಯುಕ್ತ ಮಂಡಳಿಯಿಂದ ಕ್ರಿಯಾಶೀಲ ಯುವಕ-ಯುವತಿ ಮಂಡಲಗಳಿಗೆ ಕ್ರೀಡಾ ಸಲಕರಣೆ ವಿತರಣೆ

0

ಯುವಜನ ಕ್ರೀಡಾ ಇಲಾಖೆ ಹಾಗೂ ಯುವಜನ ಸಂಯುಕ್ತ ಮಂಡಳಿ ಇದರ ಆಶ್ರಯದಲ್ಲಿ ತಾಲೂಕಿನ ಕ್ರಿಯಾಶೀಲ ಯುವಕ – ಯುವತಿ ಮಂಡಲಗಳಿಗೆ ಕ್ರೀಡಾ ಸಲಕರಣೆಗಳ ವಿತರಣಾ ಕಾರ್ಯಕ್ರಮ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಸೆ.21 ರಂದು ಯುವಜನ ಸಂಯುಕ್ತ ಮಂಡಳಿ ಮಹಾಸಭೆಯ ಸಂದರ್ಭ ನಡೆಯಿತು.

ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಕ್ರೀಡಾ ಸಾಮಾಗ್ರಿ ವಿತರಿಸಿ, ನನ್ನ ಶಾಸಕತ್ವದ 5 ವರ್ಷದ ಅವಧಿಯಲ್ಲಿ ಇಲ್ಲಿಯ ಪದಾಧಿಕಾರಿಗಳ ಬೇಡಿಕೆಯಂತೆ ಕಟ್ಟಡದ ಅಭಿವೃದ್ಧಿಗೆ ರೂ.5 ಲಕ್ಷ ಅನುದಾನ ನೀಡುತ್ತೇನೆ. ಹಾಗೂ ತಾಲೂಕಿನ ಯುವಕ-ಯುವತಿ ಮಂಡಲಗಳಿಗೆ ಕ್ರೀಡಾ ಸಾಮಾಗ್ರಿ ನೀಡಲು ಕ್ರಮಕೈಗೊಳ್ಳುವೆ ಎಂದು ಹೇಳಿದರು.

ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಮಂಡಳಿಯ ಅವಶ್ಯಕತೆ ಗಳ ಬೇಡಿಕೆ ಶಾಸಕರ ಮುಂದಿರಿಸಿದರು. ಯುವಜನ ಸಬಲೀಕರಣ ಕ್ರೀಢಾಧಿಕಾರಿ ದೇವರಾಜ್ ಮುತ್ಲಾಜೆ, ಮಂಡಳಿ ಗೌರವಾಧ್ಯಕ್ಷ ದಯಾನಂದ ಕೇರ್ಪಳ, ನೂತನ ಅಧ್ಯಕ್ಷ ಪ್ರವೀಣ್ ಜನಯನಗರ, ನೂತನ ಕಾರ್ಯದರ್ಶಿ ಗುರುರಾಜ್ ಅಜ್ಜಾವರ, ಕೋಶಾಧಿಕಾರಿ ದಯಾನಂದ ಪಾತಿಕಲ್ಲು, ಕೋಶಾಧಿಕಾರಿ ಮುರಳಿ ನಳಿಯಾರು ವೇದಿಕೆಯಲ್ಲಿ ಇದ್ದರು.

ಯುವಜನ ಕ್ರೀಡಾ ಇಲಾಖೆಯಿಂದ ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಮಿತ್ರ ಬಳಗ ಕಾಯರ್ತೋಡಿ, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು, ಭಾವೇಕ್ಯ ಯುವಕ ಮಂಡಲ ಪೆರುವಾಜೆ, ಯುವಕ ಮಂಡಲ ಮುರುಳ್ಯ ಹಾಗೂ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಗರುಡ ಯುವಕ ಮಂಡಲ ಚೊಕ್ಕಾಡಿ, ಅಕ್ಷಯ ಯುವಕ ಮಂಡಲ ನೆಟ್ಟಾರು, ಪ್ರತಾಪ ಯುವಕ ಮಂಡಲ ಅಜ್ಜಾವರ, ಶೌರ್ಯ ಯುವತಿ ಮಂಡಲ ಪೈಲಾರು, ಶಾಸ್ತಾವು ಯುವಕ ಮಂಡಲ ರೆಂಜಾಳ, ಉಳ್ಳಾಕುಲು ಕಲಾರಂಗ ಪಲ್ಲೋಡಿ ಪಂಜ ಇವರಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಗೌರವ : ಕ್ರಿಯಾಶೀಲ ನಿರ್ದೇಶಕರೆಂದು ಗುರುತಿಸಿಕೊಂಡ ದಿನೇಶ್ ಹಾಲೆಮಜಲುರನ್ನು ಹಾಗೂ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸುಧಾರಾಣಿ ಮುರುಳ್ಯ ಹಾಗೂ ತುಳಿಸಿ ಕೇವಳರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ಸಂಜಯ್ ನೆಟ್ಟಾರು ವಂದಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.