ಕುಕ್ಕುಜಡ್ಕ: ಚೊಕ್ಕಾಡಿ ಪ್ರೌಢಶಾಲಾ ಬಾಲಕಿಯರ ತಂಡ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ – ವಿಭಾಗೀಯ ಮಟ್ಟದ ಪಂದ್ಯಕ್ಕೆ ಆಯ್ಕೆ

0

ದ.ಕ. ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಣ ಇಲಾಖೆ ಬಂಟ್ವಾಳ ಮತ್ತು ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿಸೆ. 23 ರಂದು ನಡೆದ ಜಿಲ್ಲಾ ಮಟ್ಟದಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ವಿದ್ಯಾರ್ಥಿಗಳಾದ ರಚಿತಾ ಎಂ ಪಿ, ಹಸ್ತಾ ಕೆ, ಶ್ರೀಹಸ್ತಾ ಕೆ ಎಸ್,
ದೀಪ್ತಿ ಪಿ, ವರ್ಷಿತಾ ಜಿ
ಭಾಗವಹಿಸಿರುತ್ತಾರೆ.

ಚಾಮರಾಜನಗರದಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕ ಮಿಥುನ್ ಕೆ, ಶಾಲಾ ಸಮಿತಿ ‌ಕಾರ್ಯದರ್ಶಿ ತೇಜಸ್ವಿ ಕಡಪಳ ,ಸಿಬ್ಬಂದಿ ಧನ್ಯರಾಜ್ ಮೂಕಮಲೆ, ಹರಿಪ್ರಸಾದ ಕೆ ಯವರು ತರಬೇತಿ ನೀಡಿರುತ್ತಾರೆ.