ಸುಳ್ಯ ತಾಲೂಕು ಹಿಂದಿ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0


ಕೆ.ಪಿ.ಎಸ್. ಬೆಳ್ಳಾರೆಯಲ್ಲಿ ನಡೆದ ಪ್ರೌಢಶಾಲಾ ಹಿಂದಿ ವಿಷಯದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಸುಳ್ಯ ತಾಲೂಕು ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ವೈ. ಡಿ. ಹಿಂದಿ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು, ಉಪಾಧ್ಯಕ್ಷರಾಗಿ ಶ್ರೀಮತಿ ದೀಪ ಕಠಾರಿಯಾ, ಹಿಂದಿ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಏನೆಕಲ್ಲು, ಪ್ರಧಾನ ಕಾರ್ಯದರ್ಶಿಗಳಾಗಿ ಗದಾಧರ ಬಾಳುಗೋಡು, ಮುಖ್ಯ ಶಿಕ್ಷಕರು,ಜ್ಞಾನದೀಪ ಪ್ರೌಢಶಾಲೆ, ಎಲಿಮಲೆ, ಕೋಶಾಧಿಕಾರಿಗಳಾಗಿ ಶ್ರೀಮತಿ ಇಂದಿರಾವತಿ, ಹಿಂದಿ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಆರ್. ಎಂ. ಎಸ್. ಎ. ಸಂಪಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಶಂಕರ್ ನೆಲ್ಯಾಡಿ, ಹಿಂದಿ ಶಿಕ್ಷಕರು,ಸತ್ಯ ಸೇವಾ ವಿದ್ಯಾ ಕೇಂದ್ರ ಚೊಕ್ಕಾಡಿ, ಸಹ ಕಾರ್ಯದರ್ಶಿಯಾಗಿ ಲೋಕನಾಥ್ ಗೌಡ. ಪಿ. ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ, ನಿರ್ದೇಶಕರುಗಳಾಗಿ ಲೋಕೇಶ್. ಬಿ. ಹಿಂದಿ ಶಿಕ್ಷಕರು ವಿಧ್ಯಾಭೋಧಿನಿ ಪ್ರೌಢಶಾಲೆ ಬಾಳಿಲ, ಕಿಶೋರ್ ಕುಮಾರ್.ಕೆ. ಶಿಕ್ಷಕರು, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜ್, ಅರಂತೋಡು ಹಾಗೂ ಶ್ರೀಮತಿ ಗಾಯತ್ರಿ. ಕೆ. ಹಿಂದಿ ಶಿಕ್ಷಕಿ, ಕೆ.ಪಿ.ಎಸ್. ಬೆಳ್ಳಾರೆ ಆಯ್ಕೆಯಾದರು.