ಅ.14-24 : ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ 10 ದಿವಸಗಳ ನವರಾತ್ರಿ ಉತ್ಸವವು ಪೂರ್ವ ಶಿಷ್ಟ ಸಂಪ್ರದಾಯದಂತೆ ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅ.14 ರಿಂದ ಅ.23 ರಾತ್ರಿಯವರೆಗೆ ನವರಾತ್ರಿ ಉತ್ಸವ ನಡೆದು ಅ.24ರಂದು ಮಹಾಸಂಪ್ರೋಕ್ಷಣೆ ನಡೆಯಲಿರುವುದು.

ಪ್ರತಿದಿನ ವಿವಿಧ ವೈದಿಕ ಕಾರ್ಯಕ್ರಮಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಮಧ್ಯಾಹ್ನ, ರಾತ್ರಿ ನಡೆಯಲಿರುವುದು. ಅ.23 ರಂದು ಆಯುಧ ಪೂಜೆ, ವಾಹನ ಪೂಜೆ ನಡೆಯಲಿರುವುದು.
ಅ.24 ರಂದು ಬೆಳಿಗ್ಗೆ ಗಣಪತಿ ಹವನ, ಸಿಯಾಳಾಭಿಷೇಕ, ಮಕ್ಕಳಿಗೆ ಅಕ್ಷರಭ್ಯಾಸ ನಡೆಯಲಿದೆ.

ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವ ಸಂಸ್ಥಾನಂ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ರವರು ಆಶೀರ್ವಚನ ನೀಡಲಿರುವರು.
ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯರವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು.

ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರು ಅಧ್ಯಕ್ಷತೆ ವಹಿಸಲಿರುವರು. ವಿಟ್ಲ ಮಾತೃಶ್ರೀ ಮೈತ್ರೆಯಿಯ ಕು. ಸಿಂಚನಾ ಕಾನತ್ತೂರು ಧಾರ್ಮಿಕ ಉಪನ್ಯಾಸ ನೀಡಲಿರುವರು.

ಬೆಂಗಳೂರು ಪ್ರಣವ ಫೌಂಡೇಶನ್ ಗೌರವ ಸಲಹೆಗಾರ ವಿಶ್ವನಾಥ ರೈ ಪೆರ್ಲ ರವರು ಅತಿಥಿಗಳಾಗಿರುವರು. ಎಡಮಂಗಲ ಗ್ರಾ.ಪಂ ಅಧ್ಯಕ್ಷ ರಾಮಣ್ಣ ಜಾಲ್ತಾರು, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಬಾಮೂಲೆ, ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ ಸಂಘದ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಯವರು ಉಪಸ್ಥಿತಿಯಲ್ಲಿರುವರು.

ಪ್ರತಿದಿನ ಬೆಳಿಗ್ಗೆ ವಾಹನ ಪೂಜೆ ನವರಾತ್ರಿ ಉತ್ಸವದಂದು ನಡೆಯಲಿರುವುದು.