ಕಲ್ಲುಗುಂಡಿ: ಲಾರಿಯಲ್ಲಿ ದನ ಸಾಗಾಟದ ಮಾಹಿತಿ

0

ಲಾರಿಯನ್ನು ಹಿಂಬಾಲಿಸಿದ ಹಿಂದೂ ಸಂಘಟಕರು

ಕೂಲಿಶೆಡ್ ಬಳಿ ಬ್ಯಾರಿಕೇಡ್ ಹಾಕಿ ಅಡ್ಡಗಟ್ಟಿದ ಪೊಲೀಸರು

ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ದೊಡ್ಡ ಲಾರಿಯಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸಲಾಗುತ್ತಿದ್ದ ಬಗ್ಗೆ ಹಿಂದೂ ಸಂಘಟ‌ನೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ , ಸಂಘಟನೆಯವರು ಕಲ್ಲುಗುಂಡಿ ಪೊಲೀಸ್ ಹೊರಠಾಣೆಗೆ ವಿಷಯ ತಿಳಿಸಿದ ಮೇರೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಲಾರಿಯನ್ನು ತಡೆದು ನಿಲ್ಲಿಸಿದ ಘಟನೆ ಕಲ್ಲುಗುಂಡಿಯ ಕೂಲಿಶೆಡ್ ಬಳಿ ಅ.13ರಂದು ಸಂಜೆ ಸಂಭವಿಸಿದೆ.

ಸುಳ್ಯದಿಂದ ಮಡಿಕೇರಿಗೆ ಲಾರಿಯಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸಲಾಗುತ್ತಿದೆ ಎಂದು ಹಿಂದೂ ಸಂಘಟನೆಯವರಿಗೆ ಮಾಹಿತಿ ಬಂದ ಮೇರೆಗೆ ಸುಳ್ಯದ ಸಂಘಟನೆಯವರು ಲಾರಿಯನ್ನು ಹಿಂಬಾಲಿಸಿಕೊಂಡು ಬಂದರೆನ್ನಲಾಗಿದೆ. ಈ ವೇಳೆಗೆ ಸಂಘಟನೆಯವರು ಕಲ್ಲುಗುಂಡಿ ಪೊಲೀಸ್ ಹೊರಠಾಣೆಗೆ ಲಾರಿ ಬರುತ್ತಿರುವ ವಿಷಯ ತಿಳಿಸಿದ ಮೇರೆಗೆ ಪೊಲೀಸರು ಕೂಲಿಶೆಡ್ ಬಳಿಯಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ, ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿದರೆನ್ನಲಾಗಿದೆ. ಈ ವೇಳೆಗೆ ಹಿಂಬಾಲಿಸಿಕೊಂಡು ಬಂದ ಹಿಂದೂ ಸಂಘಟನೆಯವರು ಅಲ್ಲಿಗೆ ತಲುಪಿದರು.


ಲಾರಿಯ ಹಿಂಬದಿಗೆ ಟರ್ಪಲ್ ಹಾಕಿ ಬಂದ್ ಮಾಡಿದ್ದರಿಂದ ಪೊಲೀಸರು ತೆರೆದು ನೋಡಿದಾಗ ಲಾರಿಯಲ್ಲಿ ಏನೂ ಇರಲಿಲ್ಲವೆನ್ನಲಾಗಿದೆ.

ಬಳಿಕ ಲಾರಿಯನ್ನು ಪೊಲೀಸರು ಬಿಟ್ಟು ಕಳಿಸಿದರೆಂದು ತಿಳಿದುಬಂದಿದೆ ‌.