ಸೋಣಂಗೇರಿ ವೃತ್ತಕ್ಕೆ ಸೋನಾ ಹೆಸರು : ಸಾಹಿತಿ ಶಿಶಿಲ ಬೆಂಬಲ

0


ಸುಳ್ಯ ತಾಲೂಕಿನ ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವೃತ್ತಕ್ಕೆ ಸೋಣಂಗೇರಿಯವರೇ ಆದ ಮಹಾನ್ ಕಲಾವಿದ ಮೋಹನ್ ಸೋನಾ ಅವರ ಹೆಸರಿಡಬೇಕೆಂಬ ಧ್ವನಿಗೆ ಅಮರ ಸುಳ್ಯ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಪ್ರಭಾಕರ ಶಿಶಿಲ ಧ್ವನಿಗೂಡಿಸಿದ್ದಾರೆ.
“ಕಲಾವಿದ ಸೋನಾ ಈ ನಾಡು ಕಂಡ ಶ್ರೇಷ್ಠ ಸೃಜನಶೀಲ ಕಲಾವಿದರಲ್ಲಿ ಒಬ್ಬರು. ಸೋಣಂಗೇರಿ ಬಯಲು ಚಿತ್ರಾಲಯ ಮತ್ತು ಕಾರವಾರದ ರಾಕ್ ಗಾರ್ಡನ್ ಅವರ ಕಲ್ಪನಾಶಕ್ತಿಗೆ ಅಪ್ರತಿಮ ರೂಪಕಗಳು. ಅವರ ಹೆಸರನ್ನು ಒಂದು ವೃತ್ತಕ್ಕಿಡುವುದು ಅವರಿಗೆ ನಾಡು ನೀಡುವ ಗೌರವ. ಯುರೋಪಿನ ದೇಶಗಳಲ್ಲಿ ಹಳ್ಳಿಗೊಂದು ಮ್ಯೂಸಿಯಂ ಮತ್ತು ನಾಟಕ ಗೃಹ ನಿರ್ಮಾಣ ಮಾಡಿ ಆಯಾ ಊರಿನ ಸಾಹಿತಿ-ಕಲಾವಿದರ ಹೆಸರಿಡುವ ವಾಡಿಕೆಯಿದೆ. ಹಾಗೆಯೇ ಸೋಣಂಗೇರಿಯಲ್ಲಿ ಒಂದು ಸೋನಾ ಚಿತ್ರಾಲಯವನ್ನು ಚಿತ್ರಕಲಾ ಪರಿಷತ್ತಿನ ನೆರವಿನಲ್ಲಿ ನಿರ್ಮಿಸಬೇಕು. ಅದಕ್ಕೆ ರಂಗ ಮತ್ತು ಚಿತ್ರ ಕಲಾವಿದರು ಒಗ್ಗೂಡಿ ಮನಸ್ಸು ಮಾಡಬೇಕು. ಸ್ಥಳೀಯ ಆಡಳಿತವು ಕೈ ಜೋಡಿಸಬೇಕು” ಎಂದು ಡಾ. ಶಿಶಿಲ ಮನವಿ ಮಾಡಿದ್ದಾರೆ.