ಇಂದು ಮಂಡೆಕೋಲು ಮಹಾವಿಷ್ಣುಮೂರ್ತಿ ದೇವರಿಗೆ ಅಷ್ಢಬಂಧ ಬ್ರಹ್ಮಕಲಶೋತ್ಸವ

0

ಮಂಡೆಕೋಲು ಗ್ರಾಮ ದೇವರಾದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪುನಃ ಅಷ್ಠಬಂಧ ಬ್ರಹ್ಮಕಲಶೋತ್ಸವ ಇಂದು ನಡೆಯಲಿದೆ.

ಬೆಳಗ್ಗೆ 10.18ರ ಮಿಥುನ ಲಗ್ನದ ಶುಭ ಮುಹೂರ್ತ ದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಮತ್ತು ದುರ್ಗಾಂಬಿಕೆ ದೇವಿ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ನಿತ್ಯ ನೈಮಿತ್ಯ ನಿರ್ಣಯ ನಡೆಯುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು.