ನ. 7: ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಸ್ಪಿಕ್ ಮೆಕೆ ಆಯೋಜಿತ ಕೊಳಲು ವಾದನ ಕಾರ್ಯಕ್ರಮ

0

ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ನ. 7ರಂದು ಸಂಜೆ ಗಂಟೆ 5.20 ರಿಂದ 6.45 ರವರೆಗೆ ಸ್ಪಿಕ್ ಮೆಕೆ ಆಯೋಜಿಸುವ ಕೊಳಲು ಗಾಯನ ಕಾರ್ಯಕ್ರಮ ನಡೆಯಲಿದೆ. ಕೊಳಲುವಾದನದಲ್ಲಿ ಪ್ರವೀಣ್ ಗೋಡ್ಖಿಂಡಿ (ಹಿಂದುಸ್ಥಾನಿ ಕೊಳಲು ವಾದಕರು) ತಬಲದಲ್ಲಿ ಕಿರಣ್ ಗೋಡ್ಖಿಂಡಿ ಭಾಗವಹಿಸಲಿದ್ದಾರೆ.

ಶಾಲಾ ವಿದ್ಯಾರ್ಥಿಗಳ ಪೋಷಕರು, ಸಂಗೀತ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಸಂಚಾಲಕರಾದ ಎಂ.ಪಿ. ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.