ಜಾಗದ ತಕರಾರು – ಜೀವ ಬೆದರಿಕೆ ದೂರು – ಪ್ರಕರಣ ದಾಖಲು

0

ಕುದ್ಮಾರಿನಲ್ಲಿ ಜಾಗದ ತಕರಾರಿಗೆ ಸಂಬಂದಪಟ್ಟು ಹಲ್ಲೆ ನಡೆದಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ಅ.28 ರಂದು ನಡೆದಿದೆ.
ನೀಲಮ್ಮ ಪಟ್ಟೆಮನೆ ಎಂಬವರು ಬಾಳಪ್ಪ, ಸುಂದರಗೌಡ, ರತ್ನಾವತಿ, ನಿಶಾ ಎಂಬವರು, ಮನೆಗೆ ಬಂದು ಜಾಗದ ವಿಚಾರದ ತಕರಾರಿಗೆ ಸಂಬಂಧಿಸಿ, ನನಗೆ ಹಾಗೂ ಪತಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುತ್ತಾರೆ. ಬಳಿಕ ಮಕ್ಕಳಿಗೆ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಅವರೆಲ್ಲರೂ ಹೊರಟು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.