ಸುಳ್ಯ ಜೂನಿಯರ್ ಕಾಲೇಜು ಸಮೀಪ ವಿದ್ಯುತ್ ತಂತಿಗೆ ಮರ ಬಿದ್ದು ಹಾನಿ

0

ಸುಳ್ಯ ಜ್ಯೋತಿ ಸರ್ಕಲ್ ನಿಂದ ಜೂನಿಯರ್ ಕಾಲೇಜು ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ತಂತಿಗೆ ಮರಬಿದ್ದು ಹಾನಿಯಾದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ,ಮಳೆಗೆ ರಸ್ತೆ ಬದಿಯ ಮರವೊಂದು ವಿದ್ಯುತ್ ವಯರ್ ಗೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇದರಿಂದ ಈ ಭಾಗದ ಜನರಿಗೆ ಇಡೀ ರಾತ್ರಿ ವಿದ್ಯುತ್ ಇಲ್ಲದಂತಾಗಿದೆ.