ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಬಿ.ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಮೂರನೇ ಸೆಮಿಷ್ಟರ್ ಪದವಿ ಪರೀಕ್ಷೆಯಲ್ಲಿ 60 ರಲ್ಲಿ 60 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.















ಬಿ.ಎ ತರಗತಿ ವಿದ್ಯಾರ್ಥಿಗಳಾದ ಕುಮಾರಿ ದಿವ್ಯ ಕೆ ಎಸ್ ಮತ್ತು ಕುಮಾರಿ ಶರಣ್ಯ ಇವರು ಅರ್ಥಶಾಸ್ತ್ರಕ್ಕೆ ಗಣಿತ ಶಾಸ್ತ್ರ -ಮೆಥಮೆಟಿಕಲ್ ಎಕಾನಾಮಿಕ್ಸ್ ಎಂಬ ವಿಷಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕುಮಾರಿ ದಿವ್ಯ ಕೆ.ಎಸ್ ಇವರು ಕರಿಕೆಯ ಕೆ .ಪಿ ಸುಂದರ ಮತ್ತು ಶ್ರೀಮತಿ ಕೆ.ಎಸ್ ನಾಗವೇಣಿ ದಂಪತಿಗಳ ಪುತ್ರಿ. ಕುಮಾರಿ ಶರಣ್ಯ ಇವರು ಅಡೂರು ಕೊಪ್ಪಲ ನಿವಾಸಿ ಸಂಜೀವ ಪಿ., ಶ್ರೀಮತಿ ಸಾವಿತ್ರಿ ದಂಪತಿಗಳ ಪುತ್ರಿ.









