ಹಳೆಗೇಟು : ನಡು ರಸ್ತೆಯಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ಕಲ್ಲು ಬಂಡೆಗಳು

0

ಕಳೆದೆರಡು ವರ್ಷಗಳಿಂದ ಹತ್ತಾರು ದ್ವಿಚಕ್ರ ವಾಹನಗಳು ಬಿದ್ದು, ಗಾಯಗೊಂಡಿರುವ ಸವಾರರು

ಅಧಿಕಾರಿಗಳು, ಆಡಳಿತದ ಕಣ್ಣು ಎಂದು ತೆರೆದೀತು?

ಹಳೆಗೇಟು ಅಡ್ಕ ಸಮೀಪ ರಂಗಮನೆ ಹಾಗೂ ಬೆಟ್ಟಂಪಾಡಿಗೆ ಸಂಪರ್ಕಿಸುವ ರಸ್ತೆಯ ಗೋಳು ಕೇಳುವವರು ಯಾರೂ ಇಲ್ಲವೇ ಎಂದು ಪ್ರಸ್ನಿಸುವ ಸ್ಥಿತಿಗೆ ಬಂದು ತಲುಪಿದೆ.

ರಸ್ತೆ ನಡುವಲ್ಲಿ ಉಂಟಾಗಿರುವ ಹೊಂಡವನ್ನು ಮುಚ್ಚಲು ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ತಂದು ಹಾಕಿ ಈ ಕಲ್ಲುಗಳು ಇಂದು ವಾಹನ ಸವಾರರ ಪ್ರಾಣ ಹಾನಿಗಾಗಿ ಕಾಯುತ್ತಿರುವಂತೆ ಕಂಡು ಬರುತ್ತಿದೆ. ದ್ವಿಚಕ್ರ ಸವಾರರಂತೂ ಇಲ್ಲಿ ಎಚ್ಚರ ತಪ್ಪಿದರೆ ಪ್ರಾಣಪಾಯ ಸಂಭವಿಸುವುದು ಖಚಿತ. ಅಷ್ಟೊಂದು ಭಯಾನಕ ರೀತಿಯ ದೃಶ್ಯ ರಸ್ತೆಯ ನಡುವಲ್ಲಿ ಕಂಡುಬರುತ್ತಿದೆ.

ಕಳೆದ ಎರಡು ವರ್ಷಗಳಿಂದ ಈ ಭಾಗದ ಜನರು ಈ ರಸ್ತೆಯಲ್ಲಿ ಓಡಾಡಲು ಸಂಕಷ್ಟಪಡುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿಗಳನ್ನು ಬಿತ್ತರಿಸಿದರು ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಸಂಬಂಧಪಟ್ಟವರು ಇತ್ತ ಗಮನವು ಹರಿಸುವುದಿಲ್ಲ.
ಕೇವಲ ಸಣ್ಣ ವಾಹನಗಳು ಮಾತ್ರವಲ್ಲದೆ ಘನವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು ಇಲ್ಲಿ ಶಾಶ್ವತ ಕಾಮಗಾರಿಯೊಂದಿಗೆ ಕೆಲಸ ಕಾರ್ಯಗಳು ನಡೆಯಬೇಕಾಗಿದೆ. ಅದು ಬಿಟ್ಟು ಮಳೆ ಇನ್ನಿತರ ಕಾರಣಗಳಿಂದ ಹೊಂಡ ಉಂಟಾದಾಗ ಮಣ್ಣು ಕಲ್ಲು ಇವುಗಳನ್ನು ತಂದು ಹಾಕಿ ತಾತ್ಕಾಲಿಕ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಂಬಂಧ ಪಟ್ಟವರು ಕೂಡಲೆ ಕ್ರಮ ಕೈಗೊಂಡು ಯಾವುದಾದರೂ ಪ್ರಾಣ ಹಾನಿ ಸಂಭವಿಸುವ ಮೊದಲು ಈ ರಸ್ತೆಯ ದುರಸ್ತಿ ಕಾರ್ಯ ಮಾಡಬೇಕಾಗಿದೆ ಎನ್ನುವುದು ಸ್ಥಳೀಯರ ಆಗ್ರಹ