ಕುಕ್ಕೆ:ಶ್ರೀ ದೇವಳದಲ್ಲಿ ಬಲೀಂದ್ರ ಮರ ಹಾಕುವ ಕಾರ್ಯಕ್ರಮ

0

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ಶುಭದಿನವಾದ ಆದಿತ್ಯವಾರ ಬಲೀಂದ್ರ(ದೀಪಾಲೆ)ಮರವನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಏರಿಸಲಾಯಿತು. ಆರಂಭದಲ್ಲಿ ದೀಪಾಲೆ ಮರವನ್ನು ತಂದು ಶ್ರೀ ದೇವಳದ ಮುಂಭಾಗದಲ್ಲಿಇರಿಸಲಾಯಿತು. ಬಳಿಕ ಅದಕ್ಕೆ ಪುಣ್ಯ ತೀರ್ಥ ಸಿಂಪಡಿಸಿ ಪ್ರಸಾದ ಹಚ್ಚಲಾಯಿತು. ನಂತರಮರವನ್ನು ಶ್ರೀ ದೇವಳದ ಗರ್ಭಗುಡಿಯ ಮುಂಭಾಗಲ್ಲಿ ಏರಿಸಲಾಯಿತು. ರಾತ್ರಿ ಅವಲಕ್ಕಿ ಪಲ್ಲಪೂಜೆ ನಡೆದ ಬಳಿಕ ಬಲೀಂದ್ರ ಕಂಬಕ್ಕೆ ಪೂಜೆ ನಡೆಯಿತು.ಬಳಿಕಪ್ರಸಾದ ವಿತರಣೆ ನೆರವೇರಿತು.